Thursday, 12th December 2024

ಐಸಿಸಿ ಎಲೈಟ್ ಪ್ಯಾನಲ್‌ನಿಂದ ಅಲೀಂ ದಾರ್ ನಿವೃತ್ತಿ

ಲಾಹೋರ್: ಸುದೀರ್ಘ ಕಾಲದಿಂದ ಅಂಪೈರ್ ಆಗಿ ಕಾರ್ಯನಿರ್ವಹಿಸಿದ ಪಾಕಿಸ್ತಾನದ ಅಲೀಂ ದಾರ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಎಲೀಟ್ ಪ್ಯಾನಲ್‌ನಿಂದ ನಿವೃತ್ತ ರಾದರು. ಅವರ ಸ್ಥಾನಕ್ಕೆ ಪಾಕಿಸ್ತಾನದ ಎಹಸಾನ್ ರಝಾ ನೇಮಕವಾಗಿದ್ದಾರೆ.

ಅಲೀಂ ಅವರು 144 ಟೆಸ್ಟ್, 222 ಏಕದಿನ ಹಾಗೂ 69 ಟಿ20 ಪಂದ್ಯಗಳಲ್ಲಿ ಅವರು ಕಾರ್ಯ ನಿರ್ವಹಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ ದಾಖಲೆ ದಾರ್ ಅವರದ್ದಾಗಿದೆ.

‘ದಾರ್ ಅವರು ಎಲೀಟ್ ಅಂಪೈರ್‌ ಆಗಿ 19 ವರ್ಷಗಳ ದೀರ್ಘ ಕಾರ್ಯನಿರ್ವಹಣೆಯ ನಂತರ ವಿದಾಯ ಹೇಳಿದ್ದಾರೆ. ಪುರುಷರ ಕ್ರಿಕೆಟ್‌ನಲ್ಲಿ ಒಟ್ಟು 435 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ್ದರು’ ಎಂದು ಐಸಿಸಿಯು ಪ್ರಕಟಣೆಯಲ್ಲಿ ತಿಳಿಸಿದೆ.

‘ಐಸಿಸಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದು ಗೌರವದ ಸಂಕೇತ. ದೀರ್ಘ ಕಾಲದವರೆಗೆ ವಿಶ್ವದ ಬೇರೆ ಬೇರೆ ತಾಣಗಳಲ್ಲಿ ಕೆಲಸ ಮಾಡಿದ್ದೇನೆ. ಇದು ಸಂತೃಪ್ತಿ ತಂದಿದೆ’ 58 ವರ್ಷದ ಅಲೀಂ ಹೇಳಿದ್ದಾರೆ.