Thursday, 12th December 2024

ರಾಷ್ಟ್ರೀಯ ಟಿ20 ತಂಡಕ್ಕೆ ಮರಳಿದ ಆಂದ್ರೆ ರಸೆಲ್

ಗ್ರೆನೆಡಾ: ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ಆಂದ್ರೆ ರಸೆಲ್ ಒಂದು ವರ್ಷದ ಬಳಿಕ ರಾಷ್ಟ್ರೀಯ ಟಿ20 ತಂಡಕ್ಕೆ ಮರಳಿದರು. ಅವರು ದಕ್ಷಿನ ಆಫ್ರಿಕಾ ವಿರುದ್ಧದ ಟಿ20 ಸರಣಿಗಾಗಿ ಪ್ರಕಟಿಸಲಾದ 13 ಜನರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

2012 ಮತ್ತು 2016ರಲ್ಲಿ ಟಿ20 ವಿಶ್ವಕಪ್ ಗೆದ್ದ ತಂಡದ ಸದಸ್ಯನಾಗಿರುವ ರಸ್ಸೆಲ್ ಕಳೆದ ವರ್ಷದ ಮಾರ್ಚ್ ಬಳಿಕ ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿರಲಿಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ರಸೆಲ್ ನಮಗೆ ಉಪಯೋಗವಾಗುತ್ತಾರೆ. ಮುಂದಿನ ವಿಶ್ವಕಪ್ ದೃಷ್ಟಿ ಯಿಂದಲೂ ಅವರ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ತಿಳಿಸಿದೆ.

ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವೆ ಐದು ಟಿ20 ಪಂದ್ಯಗಳು ನಡೆಯಲಿದೆ.

ತಂಡ: ಕೈರನ್ ಪೊಲಾರ್ಡ್ (ನಾ), ನಿಕೋಲಸ್ ಪೂರನ್ (ಉ.ನಾ), ಫ್ಯಾಬಿಯನ್ ಅಲೆನ್, ಡ್ವೇನ್ ಬ್ರಾವೋ, ಫಿಡೆಲ್ ಎಡ್ವರ್ಡ್ಸ್, ಆಂದ್ರೆ ಫ್ಲೆಚರ್, ಕ್ರಿಸ್ ಗೇಲ್, ಜೇಸನ್ ಹೋಲ್ಡರ್, ಎವಿನ್ ಲೂಯಿಸ್, ಒಬೆಡ್ ಮೆಕಾಯ್, ಆಂದ್ರೆ ರಸ್ಸೆಲ್, ಲೆಂಡ್ಲ್ ಸಿಮ್ಮನ್ಸ್, ಕೆವಿನ್ ಸಿಂಕ್ಲೇರ್.