Sunday, 15th December 2024

ಮ್ಯಾಥ್ಯೂಸ್ ಟೈಮ್ ಔಟ್: ಲಂಕೆಗೆ ಆಘಾತ

ನವದೆಹಲಿ: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿವೆ.

ಟಾಸ್​ ಗೆದ್ದ ಬಾಂಗ್ಲಾದೇಶ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಶ್ರೀಲಂಕಾ ಬ್ಯಾಟಿಂಗ್ ಮಾಡುತ್ತಿದ್ದು, ಆರು ವಿಕೆಟ್ ನಷ್ಟಕ್ಕೆ 213 ಗಳಿಸಿದೆ. ಲಂಕಾ ಪಾಳೆಯದಲ್ಲಿ ಚರಿತ್ ಅಸಲಂಕಾ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಷರ್‌ ನೆರವಿನಿಂದ 71 ಗಳಿಸಿ, ಇನ್ನಿಂಗ್ಸ್ ಮುಂದುವರೆಸಿದ್ದಾರೆ.

ಟೈಮ್ ಔಟ್: ಮ್ಯಾಥ್ಯೂಸ್ ವಿಕೆಟ್ ಟೈಮ್ ಔಟ್ ರೂಪದಲ್ಲಿ ಬಿತ್ತು. ಕ್ರಿಕೆಟ್ ನಿಯಮದ ಪ್ರಕಾರ, ವಿಕೆಟ್ ಉರುಳಿದ ನಂತರದ ಮೂರು ನಿಮಿಷಗಳಲ್ಲಿ ಹೊಸ ಆಟಗಾರ ಕ್ರೀಸಿಗೆ ಬರಬೇಕು. ಅವಧಿ ಮೀರಿದಲ್ಲಿ ಆತನನ್ನು ಟೈಮ್ ಔಟ್ ರೂಪದಲ್ಲಿ ಔಟ್ ಎನ್ನಲಾಗುತ್ತದೆ. ಇಲ್ಲಿ ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್‌ ಅವರು ಜಾಣ್ಮೆ ಮೆರೆದರು. ಅಂದ ಹಾಗೆ, ಎಂಜೆಲೋ ಮ್ಯೂಥ್ಯೂಸ್ ಅವರ ಘಾತಕ ಬ್ಯಾಟ್ಸ್ ಮನ್.

ಶಕೀಬ್ ಅಲ್ ಹಸನ್ ನೇತೃತ್ವದ ಬಾಂಗ್ಲಾ ತಂಡ ಈವರೆಗೆ ಆಡಿದ ಏಳು ಪಂದ್ಯಗಳಲ್ಲಿ ಸತತ ಆರು ಸೋಲುಗಳನ್ನು ಕಂಡಿದೆ. ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಕುಸಾಲ್ ಮೆಂಡಿಸ್ ಮುಂದಾಳತ್ವದ ಶ್ರೀಲಂಕಾ ಆಡಿರುವ ಏಳು ಪಂದ್ಯಗಳಲ್ಲಿ ಐದು ಸೋತು, ಎರಡು ಪಂದ್ಯಗಳನ್ನು ಮಾತ್ರ ತನ್ನದಾಗಿಸಿಕೊಂಡಿದೆ.

ಆಡುವ 11ರ ಬಳಗ: ಬಾಂಗ್ಲಾದೇಶ (ಪ್ಲೇಯಿಂಗ್ XI): ತಂಜಿದ್ ಹಸನ್, ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ಮುಶ್ಫಿಕರ್ ರಹೀಮ್ (ವಿಕೆಟ್​ ಕೀಪರ್​), ಮಹಮ್ಮದುಲ್ಲಾ, ಶಾಕಿಬ್ ಅಲ್ ಹಸನ್ (ನಾಯಕ), ತೌಹಿದ್ ಹೃದಯೊಯ್, ಮೆಹಿದಿ ಹಸನ್ ಮಿರಾಜ್, ತನ್ಜಿಮ್ ಹಸನ್ ಸಾಕಿಬ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ.

ಶ್ರೀಲಂಕಾ (ಆಡುವ XI): ಪಾತುಮ್ ನಿಸ್ಸಾಂಕ, ಕುಸಾಲ್ ಪೆರೆರಾ, ಕುಸಲ್ ಮೆಂಡಿಸ್ (ವಿಕೆಟ್​ ಕೀಪರ್/ನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಮಹೀಶ್ ತೀಕ್ಷಣ, ದುಷ್ಮಂತ ಚಮೀರ, ಕಸುನ್ ರಜಿತ, ದಿಲ್ಶನ್ ಮಧುಶಂಕ.