Sunday, 15th December 2024

ಅಜಿಂಕ್ಯ ರಹಾನೆಗೆ ಆಸೀಸ್‌ ಮಾಜಿ ಆಟಗಾರರಿಂದ ಮೆಚ್ಚುಗೆಯ ಸುರಿಮಳೆ

ನವದೆಹಲಿ: ಭಾರತ ಟೆಸ್ಟ್ ತಂಡದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಅವರನ್ನು ಆಸ್ಟ್ರೇಲಿಯಾ ದಂತಕತೆಗಳು ಹೊಗಳು ತ್ತಿರುವುದು ನೋಡುವಾಗ ಹೃದಯ ತುಂಬಿ ಬಂತು ಎಂದು ಭಾರತದ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಮೆಲ್ಬರ್ನ್‌ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅಜಿಂಕ್ಯ ರಹಾನೆಯ ಫೀಲ್ಡ್ ಸೆಟ್ಟಿಂಗ್, ಬ್ಯಾಟಿಂಗ್, ಫೀಲ್ಡಿಂಗ್, ಒಟ್ಟಾರೆ ನಾಯಕತ್ವ ಗಮನ ಸೆಳೆದಿತ್ತು. ಆ ಪಂದ್ಯದಲ್ಲಿ ಭಾರತ 8 ವಿಕೆಟ್ ‌ಗಳ ಸುಲಭ ಗೆಲುವೂ ಕಂಡಿತ್ತು.

ರಿಕಿ ಪಾಂಟಿಂಗ್, ಆಯಡಂ ಗಿಲ್‌ಕ್ರಿಸ್ಟ್‌, ಮೈಕ್ ಹಸ್ಸಿ, ಶೇನ್ ವಾರ್ನ್ ಮೊದಲಾದವರು ರಹಾನೆ ಮುಂದಾಳತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.