ಟೋಕಿಯೋ: ಗುರುವಾರ ನಡೆದ ಟೋಕಿಯೋ 2020 ಒಲಿಂಪಿಕ್ಸ್ನಲ್ಲಿ ಭಾರತದ ಬಿಲ್ಲುಗಾರ ಆತನ್ ದಾಸ್ ಪುರುಷರ ವೈಯಕ್ತಿಕ ಬಿಲ್ಲುಗಾರಿಕೆ ಸ್ಪರ್ಧೆಯ ಮುಂದಿನ ಸುತ್ತಿಗೆ ಮುನ್ನಡೆದರು. ಆರ್ಚರಿ ಕ್ರೀಡೆಯಲ್ಲಿ ಭರ್ಜರಿ ಜಯ ಸಾಧಿಸಿದ್ದು, ಪ್ರೀ ಕ್ವಾರ್ಟರ್ ಫೈನಲ್ ಗೆ ಪ್ರವೇಶ ಪಡೆದಿದ್ದಾರೆ.
ಮಾಜಿ ಒಲಿಂಪಿಕ್ ಚಾಂಪಿಯನ್ ಆಗಿದ್ದ 39 ವರ್ಷದ ಓಹ್ ಜಿನ್ ಹೈಕ್ 1/32 ಎಲಿಮಿನೇಷನ್ ಸುತ್ತಿನಲ್ಲಿ ಭಾರತೀಯರಿಂದ ಕಠಿಣ ಸವಾಲನ್ನು ಎದುರಿಸಿದರು. ದಾಸ್ ಅದ್ಭುತ ಸ್ಥಿತಿಸ್ಥಾಪಕತ್ವವನ್ನು ತೋರಿಸಿದರು. 2 ನೇ ಸುತ್ತಿನಲ್ಲಿ ದಾಸ್ 6-4ರಿಂದ ಹಯೆಕ್ ಅವರನ್ನು ಸೋಲಿಸಿ, ಪೂರ್ವ-ಕ್ವಾರ್ಟರ್-ಫೈನಲ್ಸ್ಗೆ ತಲುಪಿ ದ್ದಾರೆ.
ಪುರುಷರ ವೈಯಕ್ತಿಕ ವಿಭಾಗದಲ್ಲಿ ಆತನ್ ದಾಸ್, ವಿಶ್ವದ ನಂ.3 ರ‍್ಯಾಂಕ್‌ನ ದಕ್ಷಿಣ ಕೊರಿಯಾದ ಓಹ್ ಜಿನ್ ಹಿಯೆಕ್ ವಿರುದ್ಧ 6-5ರ ಅಂತರದ ರೋಚಕ ಗೆಲುವು ದಾಖಲಿಸಿದರು.
ಈ ಹಿಂದೆ ಆತನ್ ದಾಸ್, ಮೊದಲ ಸುತ್ತಿನಲ್ಲಿ ಚೀನಾ ತೈಪೆಯ ಯೂ-ಚೆಂಗ್ ವಿರುದ್ಧ ಗೆಲುವು ದಾಖಲಿಸಿ ಬಳಿಕ ಜಿನ್ ಹಿಯೆಕ್ ವಿರುದ್ಧವೂ ಮೇಲುಗೈ ಸಾಧಿಸು ವಲ್ಲಿ ಯಶಸ್ವಿಯಾಗಿದ್ದರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಹಾಗೂ ಕಂಚಿನ ಪದಕ ಸಾಧನೆ ಮಾಡಿರುವ ಜಿನ್ ಜಿಯೆಕ್, ಪ್ರಸ್ತುತ ಸಾಗುತ್ತಿರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತಂಡ ವಿಭಾಗದಲ್ಲಿ ಸ್ವರ್ಣ ಪದಕ ಗೆದ್ದಿದ್ದಾರೆ.