Sunday, 15th December 2024

ಆಶನ್​ ಸರಣಿ; ಆಸ್ಟ್ರೇಲಿಯಾಗೆ ಮುನ್ನಡೆ

ಲಾರ್ಡ್ಸ್: ಇಂಗ್ಲೆಂಡ್​​ ಮತ್ತು ಆಸ್ಟ್ರೇಲಿಯಾ ನಡುವಿನ ಆಶನ್​ ಸರಣಿಯ ಎರಡನೇ ಟೆಸ್ಟ್​​ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವಿನ ನಗೆ ಬೀರಿದೆ.

ಇಂಗ್ಲೆಂಡ್​ ವಿರುದ್ಧ ಆಸ್ಟ್ರೇಲಿಯಾ 43 ರನ್​ಗಳ ಜಯವನ್ನು ಸಾಧಿಸಿದೆ. ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ್ದ ಆಸ್ಟ್ರೇಲಿಯಾ ಎರಡನೇ ಪಂದ್ಯದಲ್ಲೂ ಗೆಲುವಿನ ಆಟವನ್ನು ಮುಂದುವರೆಸಿತು.

ಇಂದು ಇಂಗ್ಲೆಂಡ್​ ಗೆಲುವಿಗೆ 257 ರನ್​ ಅಗತ್ಯತೆ ಇತ್ತು. ಎರಡು ವಿಕೆಟ್​ ಕಳೆದುಕೊಂಡು​ 129 ರನ್​ ಗಳಿಸಿತ್ತು. ಬೆನ್​ ಡಕೆಟ್​ ಮತ್ತು ನಾಯಕ ಸ್ಟೋಕ್ಸ್​ ಜೋಡಿ ಆಂಗ್ಲರ ತಂಡಕ್ಕೆ ಉತ್ತಮ ಆಸರೆ ಆದರಲ್ಲದೇ ಅವರ ಬೇಸ್​​ಬಾಲ್​ ನೀತಿಯಂತೆ ಬ್ಯಾಟ್​ ಬೀಸಿದರು. ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್​ 6 ವಿಕೆಟ್ ನಷ್ಟಕ್ಕೆ 243 ರನ್​ ಗಳಿಸಿತ್ತು.

ಡಕೆಟ್ ನಂತರ ಬಂದ ಜಾನಿ ಬೈರ್‌ಸ್ಟೋವ್ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಭೋಜನ ವಿರಾಮದ ವೇಳೆಗೆ ಕ್ರೀಸ್​ನಲ್ಲಿ 1 ರನ್​ನಿಂದ ಸ್ಟೂವರ್ಟ್​ ಬ್ರಾಡ್​ ಮತ್ತು 108 ರನ್​ ಗಳಿಸಿದ ಸ್ಟೋಕ್ಸ್​ ಇದ್ದರು. ಅಂತಿಮವಾಗಿ ಇಂಗ್ಲೆಂಡ್​ ವಿರುದ್ಧ ಆಸ್ಟ್ರೇಲಿಯಾ 43 ರನ್​ಗಳಿಂದ ಗೆಲುವು ಸಾಧಿಸಿತು.

ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಸ್ಟೀವನ್​ ಸ್ಮಿತ್​ ಭರ್ಜರಿ ಶತಕದೊಂದಿಗೆ (110) 416 ರನ್​ ಪೇರಿಸಿತ್ತು. ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ್ದ ಇಂಗ್ಲೆಂಡ್​ 325 ರನ್​ಗಳಿಗೆ ಸರ್ವಪತನ ಕಂಡಿತು. ಇದರಿಂದ 91 ರನ್​​ಗಳ ಹಿನ್ನಡೆಯನ್ನು ಆಂಗ್ಲರು ಅನುಭವಿಸಿದ್ದರು.

ಎರಡನೇ ಇನ್ನಿಂಗ್ಸ್​ ಆರಂಭಿಸಿದ್ದ ಆಸ್ಟ್ರೇಲಿಯಾವು 279 ರನ್​ ಮಾತ್ರ ಕಲೆ ಹಾಕಿ 371 ರನ್​ಗಳ ಗುರಿಯನ್ನು ಎದುರಾಳಿ ತಂಡಕ್ಕೆ ನೀಡಿತ್ತು. ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್​​ ಆರಂಭಿಕ ಆಘಾತವನ್ನು ಎದುರಿಸಿತು. ಇದರ ನಡುವೆಯೇ ಬೆನ್​ ಡಕೆಟ್​ (83) ಹಾಗೂ ನಾಯಕ ಬೆನ್​ ಸ್ಟೋಕ್ಸ್​ (155) ವೀರೋಚಿತ ಆಟದೊಂದಿಗೆ ಗೆಲುವಿನ ಆಸೆ ಚಿಗುರಿಸಿದರು. ನಾಯಕ ಸ್ಟೋಕ್ಸ್​​ ಭರ್ಜರಿ 9 ಸಿಕ್ಸರ್​ ಹಾಗೂ 9 ಬೌಂಡರಿಗಳ ಮೂಲಕ ವೀರಾವೇಶದ ಆಟವನ್ನು ಪ್ರದರ್ಶಿಸಿ ದರು. ಆದರೆ ತಂಡ ಮೊತ್ತ 301 ರನ್​ ಆಗಿದ್ದಾಗ ಸ್ಟೋಕ್ಸ್​ ನಿರ್ಗಮಿಸಿದರು. ಇದರಿಂದ ಇಂಗ್ಲೆಂಡ್​​ ಮತ್ತೆ ಕುಸಿಯಿತು.