ಬೆಂಗಳೂರು: ಟೆನಿಸ್ ಆಟಗಾರ್ತಿ ಆಶ್ಲೆ ಬಾರ್ಟಿ(25) ಅವರು ಟೆನಿಸ್ ಆಟಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಅವರು ‘ಇದೊಂದು ಕಣ್ಣೀರಿನ ವಿದಾಯ’ ಎಂದು ಹೇಳಿಕೊಂಡಿದ್ದಾರೆ.
‘ನಾನು ನನ್ನ ಟೆನಿಸ್ ಜೀವನದಿಂದ ತುಂಬಾ ಸಂತೋಷವಾಗಿದ್ದೇನೆ. ಟೆನಿಸ್ ನನಗೆ ನೀಡಿದ ಎಲ್ಲದಕ್ಕೂ ನಾನು ತುಂಬಾ ಕೃತಜ್ಞ ಳಾಗಿದ್ದೇನೆ. ಆದರೆ, ಅದ ರಿಂದ ದೂರ ಸರಿಯಲು ಮತ್ತು ಇತರ ಕನಸುಗಳನ್ನು ಬೆನ್ನಟ್ಟಲು ಇದು ಸರಿಯಾದ ಸಮಯ ಎಂದು ನನಗೆ ತಿಳಿದಿದೆ’ ಎಂದಿದ್ದಾರೆ.
ಎರಡು ಬಾರಿ ವಿಶ್ವದ ನಂ.1 ಆಟಗಾರ್ತಿ ಆಸ್ಟ್ರೇಲಿಯಾ ಮೂಲದ ಬಾರ್ಟಿ ಅವರು, ಮೂರು ಬಾರಿ ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು.
2019 ರಲ್ಲಿ ಫ್ರೆಂಚ್ ಓಪನ್, 2021 ರಲ್ಲಿ ವಿಂಬಲ್ಡನ್ ಮತ್ತು 2022 ರಲ್ಲಿ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದರು. ಬಾರ್ಟಿ ಕಳೆದ ವರ್ಷದ ಕೊನೆಯಲ್ಲಿ ಅವರ ದೀರ್ಘಕಾಲೀನ ಗೆಳೆಯ ಗ್ಯಾರಿ ಕಿಸ್ಸಿಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.