Sunday, 15th December 2024

ರಿಲೇ ಸ್ಪರ್ಧೆ: ಭಾರತಕ್ಕೆ ಎರಡು ಕಂಚಿನ ಪದಕ

ಹ್ಯಾಂಗ್‌ಝೌ: ಏಷ್ಯನ್ ಗೇಮ್ಸ್ 2023 ರ ಒಂಬತ್ತನೇ ದಿನ ಭಾರತೀಯ ರೋಲರ್ ಸ್ಕೇಟರ್‌ಗಳ ಪುರುಷ ಮತ್ತು ಮಹಿಳೆಯರ 3000 ಮೀಟರ್ ತಂಡ ರಿಲೇ ಸ್ಪರ್ಧೆಗಳಲ್ಲಿ ಎರಡು ಕಂಚಿನ ಪದಕಗಳನ್ನು ತನ್ನ ಮುಡಿಗೇರಿಸಿ ಕೊಂಡಿದೆ.

ಆರ್ಯನ್‌ಪಾಲ್ ಸಿಂಗ್ ಘುಮಾನ್, ಆನಂದಕುಮಾರ್ ವೆಲ್‌ಕುಮಾರ್, ಸಿದ್ಧಾಂತ್ ಕಾಂಬ್ಳೆ ಮತ್ತು ವಿಕ್ರಮ್ ಇಂಗಳೆ ಅವರು ಪುರುಷರ ತಂಡ ರಿಲೇಯಲ್ಲಿ 4:10.128 ಸೆಕೆಂಡ್‌ಗಳೊಂದಿಗೆ ಎರಡನೇ ಕಂಚಿನ ಪದಕ ಗೆದ್ದರು.