Saturday, 14th December 2024

ಏಷ್ಯನ್ ಗೇಮ್ಸ್: ಫೈನಲ್‌ಗೆ ಮುರಳಿ ಶ್ರೀಶಂಕರ್, ಜೆಸ್ವಿನ್ ಆಲ್ಡ್ರಿನ್

ಹ್ಯಾಂಗ್‌ಝೌ: ಏಷ್ಯನ್ ಗೇಮ್ಸ್ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಭಾರತೀಯ ಅಥ್ಲೀಟ್‌ಗಳಾದ ಮುರಳಿ ಶ್ರೀಶಂಕರ್ ಮತ್ತು ಜೆಸ್ವಿನ್ ಆಲ್ಡ್ರಿನ್ ಫೈನಲ್‌ಗೆ ಅರ್ಹತೆ ಪಡೆದರು. ಈ ಮೂಲಕ ಅಥ್ಲೆಟಿಕ್ಸ್‌ನಲ್ಲಿ ಭಾರತವು ಹೆಚ್ಚು ಪದಕಗಳನ್ನು ಗೆಲ್ಲುವ ಸಾಧ್ಯತೆ ಹೆಚ್ಚಿಸಿದೆ.

ಉದ್ದಜಿಗಿತ ಪಟುಗಳಾದ ಮುರಳಿ ಶ್ರೀಶಂಕರ್ ಮತ್ತು ಜೆಸ್ವಿನ್ ಆಲ್ಡ್ರಿನ್ ಪುರುಷರ ಲಾಂಗ್ ಜಂಪ್ ಸ್ಪರ್ಧೆಯ ಫೈನಲ್‌ಗೆ ಅರ್ಹತೆ ಪಡೆಯುವ ಮೂಲಕ ಏಳನೇ ದಿನದ ಕ್ರೀಡಾಕೂಟವನ್ನು ಉನ್ನತ ಮಟ್ಟದಲ್ಲಿ ಆರಂಭಿಸಿದರು.

ಎರಡು ವಿಭಿನ್ನ ಗುಂಪುಗಳಲ್ಲಿ ಸ್ಥಾನ ಪಡೆದ ಶ್ರೀಶಂಕರ್ ಮತ್ತು ಜೆಸ್ವಿನ್ ತಮ್ಮ ಅಂತಿಮ ಸ್ಥಾನ ಕಾಯ್ದಿರಿಸಲು ಕ್ರಮವಾಗಿ, 7.97 ಮೀಟರ್ ಮತ್ತು 7.67 ಮೀ. ಅತ್ಯುತ್ತಮ ಜಿಗಿತಗಳನ್ನು ದಾಖಲಿಸಿದರು.