Thursday, 3rd October 2024

10 ಮೀಟರ್ ಏರ್ ಪಿಸ್ತೂಲ್: ಬೆಳ್ಳಿ ಗೆದ್ದ ಶೂಟರ‍್ಸ್

ಹ್ಯಾಂಗ್‌ಝೌ: ಭಾರತದ ಶೂಟರ್‌ಗಳಾದ ದಿವ್ಯಾ ತಾಡಿಗೋಲ್ ಸುಬ್ಬರಾಜು ಮತ್ತು ಸರಬ್ಜೋತ್ ಸಿಂಗ್ ಅವರು ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 19 ನೇ ಏಷ್ಯನ್ ಗೇಮ್ಸ್‌ ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಅರ್ಹತಾ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದಾರೆ.

ಶನಿವಾರ ನಡೆದ 19ನೇ ಏಷ್ಯನ್ ಗೇಮ್ಸ್‌ನ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತದ ಶೂಟರ್‌ಗಳಾದ ದಿವ್ಯಾ ತಾಡಿಗೋಳ್ ಸುಬ್ಬರಾಜು ಮತ್ತು ಸರಬ್ಜೋತ್ ಸಿಂಗ್ ಬೆಳ್ಳಿ ಗೆದ್ದು ಭಾರತದ ಪದಕಗಳ ಸಂಖ್ಯೆಯನ್ನು 34ಕ್ಕೆ ಕೊಂಡೊ ಯ್ದರು.

ಚೀನಾದ ಬೋವೆನ್ ಜಾಂಗ್ ಮತ್ತು ರಾಂಕ್ಸಿನ್ ಜಿಯಾಂಗ್ ಭಾರತದ ವಿಶ್ವ ಚಾಂಪಿಯನ್‌ ಗಳನ್ನು ಸೋಲಿಸಿ ಚಿನ್ನ ಗೆದ್ದರು.

ಕಂಚಿನ ಪದಕವನ್ನು ಇರಾನ್‌ನ ಜೋಹರಿಖೌ ಅಮೀರ್ ಮತ್ತು ಹನಿಯೆಹ್ ರೋಸ್ತಮಿ ಯಾನ್ ಮತ್ತು ದಕ್ಷಿಣ ಕೊರಿಯಾದ ವೊನ್ಹೋ ಲೀ ಮತ್ತು ಬೋಮಿ ಕಿಮ್ ಗೆದ್ದರು.