Sunday, 15th December 2024

1-0 ಅಂತರದಿಂದ ಗೆದ್ದ ಎಟಿಕೆ ಮೋಹನ್ ಬಗಾನ್ ತಂಡ

ಫಟೋರ್ಡಾ: ಆತಿಥೇಯ ಗೋವಾ ಎಫ್ ಸಿ ವಿರುದ್ಧ ಫಟೋರ್ಡಾ ಸ್ಟೇಡಿಯಂನಲ್ಲಿ ಬುಧವಾರ ನಡೆದ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ರಾಯ್ ಕೃಷ್ಣ ಗಳಿಸಿದ ಏಕೈಕ ಗೋಲು ನೆರವಿನಿಂದ ಎಟಿಕೆ ಮೋಹನ್ ಬಗಾನ್ ತಂಡ 1-0 ಗೋಲುಗಳ ಅಂತರದಿಂದ ಜಯ ಸಾಧಿಸಿದೆ.

85ನೇ ನಿಮಿಷದಲ್ಲಿ ಸ್ಪಾಟ್-ಕಿಕ್ ನಲ್ಲಿ ರಾಯ್ ಕೃಷ್ಣ ಅವರು ಮೋಹನ್ ಬಗಾನ್ ಪರ ಗೆಲುವಿನ ಗೋಲು ಗಳಿಸಿದರು. ಮೋಹನ್ ಬಗಾನ್ ಮೊದಲಾರ್ಧದಲ್ಲಿ ಪ್ರಾಬಲ್ಯ ಮೆರೆದಿತ್ತು. ಫಿಜಿ ಆಟಗಾರ ರಾಯ್ ಕೃಷ್ಣ 5ನೇ ಗೋಲು ಗಳಿಸಿ ಮತ್ತೊಮ್ಮೆ ಮಿಂಚಿದರು.

ಈ ಮೂಲಕ ಮೋಹನ್ ಬಗಾನ್ ತಂಡ 6 ಪಂದ್ಯಗಳಲ್ಲಿ 13 ಅಂಕ ಕಲೆ ಹಾಕಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿತು. 6 ಪಂದ್ಯಗಳಲ್ಲಿ 8 ಅಂಕಗಳನ್ನು ಗಳಿಸಿರುವ ಗೋವಾ ಎಫ್ ಸಿ ಆರನೇ ಸ್ಥಾನದಲ್ಲೆ ಉಳಿದಿದೆ.