ಬ್ರಿಸ್ಬೇನ್: ಗಾಬಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್(Australia vs India 3rd Test) ಸರಣಿಯ ಮೂರನೇ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 445 ರನ್ ಗಳಿಸಿ ಆಲೌಟ್ ಆಗಿದೆ. ಇದಕ್ಕುತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ಭಾರತ(AUS vs IND) 39 ರನ್ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಸದ್ಯ ಪಂದ್ಯ ಮಳೆಯಿಂದ ಸ್ಥಗಿತಗೊಂಡಿದೆ. ಕೆ.ಎಲ್ ರಾಹುಲ್(21) ಮತ್ತು ರಿಷಭ್ ಪಂತ್(9) ಕ್ರೀಸ್ನಲ್ಲಿದ್ದಾರೆ.
7 ವಿಕೆಟ್ಗೆ 405 ರನ್ ಗಳಿಸಿದ್ದಲ್ಲಿಂದ ಸೋಮವಾರ ಆಟ ಮುಂದುವರಿಸಿದ ಆಸ್ಟ್ರೇಲಿಯಾ 445 ರನ್ಗೆ ಆಲೌಟ್ ಆಯಿತು. 45 ರನ್ ಬಾರಿಸಿದ್ದ ಅಲೆಕ್ಸ್ ಕ್ಯಾರಿ 70 ರನ್ ಬಾರಿಸಿದರು. ಮಿಚೆಲ್ ಸ್ಟಾರ್ಕ್ 18 ರನ್ ಗಳಿಸಿದರು. ಭಾನುವಾರ 5 ವಿಕೆಟ್ ಕಿತ್ತಿದ್ದ ಜಸ್ಪ್ರೀತ್ ಬುಮ್ರಾ ಸೋಮವಾರ ಒಂದು ವಿಕೆಟ್ ಉರುಳಿಸಿದರು. ಒಟ್ಟು 76 ರನ್ಗೆ 6 ವಿಕೆಟ್ ಕಿತ್ತರು. ಮೊಹಮ್ಮದ್ ಸಿರಾಜ್ 2 ವಿಕೆಟ್ ಕಿತ್ತರು.
ಜೈಸ್ವಾಲ್ ಈ ಪಂದ್ಯದಲ್ಲಿಯೂ ಮಿಚೆಲ್ ಸ್ಟಾರ್ಕ್ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಸ್ಟಾರ್ಕ್ ಅವರ ಮೊದಲ ಎಸೆತವನ್ನು ಬೌಂಡರಿ ಬಾರಿಸಿದ ಜೈಸ್ವಾಲ್ ಮುಂದಿನ ಎಸೆತದಲ್ಲಿ ಮಿಚೆಲ್ ಮಾರ್ಷ್ಗೆ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು. ಬಳಿಕ ಬಂದ ಶುಭಮನ್ ಗಿಲ್ ಕೂಡ ಒಂದು ರನ್ಗೆ ಔಟಾದರು. ಅನುಭವಿ ಆಟಗಾರ ವಿರಾಟ್ ಕೊಹ್ಲಿ 3 ರನ್ಗೆ ಸೀಮಿತರಾದರು.
ಇದನ್ನೂ ಓದಿ AUS vs IND: ಬುಮ್ರಾಗೆ ಜನಾಂಗೀಯ ನಿಂದನೆ ಮಾಡಿದ ಇಂಗ್ಲೆಂಡ್ ಮಾಜಿ ಆಟಗಾರ್ತಿ
2ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಮುಂಬೈ
ಬೆಂಗಳೂರು: ಸೂರ್ಯಾಂಶ್ ಶೆಡ್ಗೆ(36*) ಮತ್ತು ಸೂರ್ಯಕುಮಾರ್ ಯಾದವ್(48) ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ(SMAT Final 2024) ಫೈನಲ್ ಪಂದ್ಯದಲ್ಲಿ ಮುಂಬೈ ತಂಡ ಮಧ್ಯಪ್ರದೇಶ ವಿರುದ್ಧ 5 ವಿಕೆಟ್ಗಳ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. 13 ವರ್ಷದ ಬಳಿಕ ಫೈನಲ್ ಪ್ರವೇಶಿಸಿದ ಮಧ್ಯಪ್ರದೇಶ ಮತ್ತೆ ಟ್ರೋಫಿ ಗೆಲ್ಲುವ ಅವಕಾಶ ಕಳೆದುಕೊಂಡಿತು. ಇದು ಮುಂಬೈ ತಂಡಕ್ಕೆ ಒಲಿದ 2ನೇ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ. ಇದಕ್ಕೂ ಮುನ್ನ 2022-23ರ ಸಾಲಿನ ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ಪ್ರಶಸ್ತಿ ಗೆದಿತ್ತು.
ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಮಧ್ಯಪ್ರದೇಶ, ನಾಯಕ ರಜತ್ ಪಾಟಿದಾರ್ ಸಿಡಿಸಿದ ಬಿರುಸಿನ ಅರ್ಧ ಶತಕದ ನೆರವಿನಿಂದ 20 ಓವರ್ಗೆ 8 ವಿಕೆಟ್ ನಷ್ಟಕ್ಕೆ 174 ರನ್ ಬಾರಿಸಿತು. ಜವಾಬಿತ್ತ ಮುಂಬೈ ತಂಡ 17.5 ಓವರ್ಗಳಲ್ಲಿ 5 ವಿಕೆಟ್ಗೆ 180 ರನ್ ಬಾರಿಸಿ ಗೆಲುವಿನ ನಗೆ ಬೀರಿತು.