ಅಹಮದಾಬಾದ್: ಹಾಲಿ ಚಾಂಪಿಯನ್ ಇಂಗ್ಲೆಂಡ್ ಸಾಂಪ್ರದಾಯಿಕ ಎದುರಾಳಿ ಆದ ಆಸ್ಟ್ರೇಲಿಯಾದ ವಿರುದ್ಧ 33 ರನ್ಗಳಿಂದ ಸೋಲು ಕಂಡಿದೆ.
286ರನ್ನ ಗುರಿ ಬೆನ್ನಟ್ಟಿದ ಆಂಗ್ಲರು 48.1 ಓವರ್ಗೆ 253 ರನ್ ಗಳಿಸಿ ಸರ್ವಪತನ ಕಂಡಿದ್ದಾರೆ.
ಹಾಲಿ ಚಾಂಪಿಯನ್ ಇಂಗ್ಲೆಂಡ್ಗೆ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ತನ್ನ ಉತ್ತಮ ಪ್ರದರ್ಶನವನ್ನು ಗೆಲುವು ಮಾತ್ರ ಕೈಗೆಟಕುತ್ತಿಲ್ಲ. ಇದಕ್ಕೆ ಕ್ರಿಕೆಟ್ ಶೈಲಿಯನ್ನು ಬೇಸ್ಬಾಲ್ಗೆ ಬದಲಿಸಿದ್ದೇ ಕಾರಣವಾ ಎಂಬುದನ್ನು ತಂಡವೇ ವಿಮರ್ಶೆ ಮಾಡಿಕೊಳ್ಳಬೇಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಸ್ಟೀವನ್ ಸ್ಮಿತ್ (44), ಮಾರ್ನಸ್ ಲ್ಯಾಬುಶೇನ್ (71) ಮತ್ತು ಕ್ಯಾಮೆರಾನ್ ಗ್ರೀನ್ (47) ಇನ್ನಿಂಗ್ಸ್ನ ಸಹಾಯದಿಂದ 49.3 ಓವರ್ಗೆ 286 ರನ್ ಗಳಿಸಿ ಆಲ್ಔಟ್ ಆಗಿತ್ತು. ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾದರು. ಶೂನ್ಯಕ್ಕೆ ಮೊದಲ ವಿಕೆಟ್ ಪತನ ಕಂಡಿತು.
ಆಸ್ಟ್ರೇಲಿಯಾ ಪರ ಆಡಮ್ ಝಂಪಾ 3, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹ್ಯಾಜಲ್‌ವುಡ್ ತಲಾ 2 ವಿಕೆಟ್ ಪಡೆಯುವಲ್ಲಿ ಯಶಸ್ವಿ ಆದರು.
ಆಡಮ್ ಝಂಪಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.