Thursday, 19th September 2024

ಪ್ಯಾರಲಿಂಪಿಕ್: ಏರ್ ರೈಫಲ್’ನಲ್ಲಿ ಚಿನ್ನ ಗೆದ್ದ ಅವನಿ ಲೆಖರಿ

ಟೋಕಿಯೊ: ಪ್ಯಾರಲಿಂಪಿಕ್ ನಲ್ಲಿ ಸಹ ಭಾರತ ಇತಿಹಾಸ ಸೃಷ್ಟಿಸಿದೆ. ಸೋಮವಾರ ಬೆಳಗ್ಗೆ ಮಹಿಳೆಯರ 10 ಮೀಟರ್ ಏರ್ ರೈಫಲ್ ಎಸ್ ಎಚ್ 1 ಪಂದ್ಯದಲ್ಲಿ 19 ವರ್ಷದ ಅವನಿ ಚಿನ್ನದ ಪದಕ ಗಳಿಸಿದ್ದಾರೆ. ಪ್ಯಾರಲಿಂಪಿಕ್ ನಲ್ಲಿ ಈ ಮೂಲಕ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಭಾಜನರಾ ಗಿದ್ದಾರೆ.

ಪ್ಯಾರಲಿಂಪಿಕ್ ನಲ್ಲಿ ಚಿನ್ನ ಗೆದ್ದ ಭಾರತೀಯ ಆಟಗಾರರಲ್ಲಿ ಅವನಿ ಲೆಖರಿ ನಾಲ್ಕನೆಯವರಾಗಿದ್ದಾರೆ. 19 ವರ್ಷದ ಅವನಿ ಒಟ್ಟು 249.6 ಅಂಕಗಳನ್ನು ಗಳಿಸುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ. ಈ ಹಿಂದಿನ ಭಾರತದ ಕ್ರೀಡಾಪಟುಗಳಾದ ಈಜುಗಾರ ಮುರಳಿಕಾಂತ್ ಪೆಟ್ಕರ್(1972ರಲ್ಲಿ), ಜಾವೆಲಿನ್ ಥ್ರೋವರ್ ದೇವೇಂದ್ರ ಜಾಜರಿಯಾ(2004 ಮತ್ತು 2016ರಲ್ಲಿ) ಮತ್ತು ಹೈಜಂಪ್ ನಲ್ಲಿ 2016ರಲ್ಲಿ ತಂಗವೇಲು ಮರಿಯಪ್ಪನ್ ಚಿನ್ನದ ಪದಕ ಗಳಿಸಿದ್ದರು.

ಪ್ಯಾರಲಿಂಪಿಕ್ ನಲ್ಲಿ ಕ್ರೀಡಾಪಟುಗಳು ತಮ್ಮ ಕಾಲುಗಳಲ್ಲಿ ದುರ್ಬಲತೆ ಹೊಂದಿರುವವರು ಕುಳಿತುಕೊಂಡು ಸಾಧ್ಯವಾದವರು ನಿಂತುಕೊಂಡು ಸ್ಪರ್ಧಿಸುತ್ತಾರೆ.

ಅವನಿಲೇಖರ ಅವರದ್ದು ಅಸಾಧಾರಣ ಪ್ರದರ್ಶನ, ಕಷ್ಟಪಟ್ಟು ಗಳಿಸಿದ ಮತ್ತು ಅರ್ಹವಾದ ಚಿನ್ನವನ್ನು ಗೆದ್ದ ನಿಮಗೆ ಅಭಿನಂದನೆಗಳು, ನಿಮ್ಮ ಶ್ರಮಶೀಲ ಸ್ವಭಾವ ಮತ್ತು ಶೂಟಿಂಗ್ ಕಡೆಗೆ ಉತ್ಸಾಹದಿಂದಾಗಿ ಇದು ಸಾಧ್ಯವಾಗಿದೆ. ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು ಎಂದು ಪ್ರಧಾನಿ ಶುಭಾಶಯ ತಿಳಿಸಿದ್ದಾರೆ.

Leave a Reply

Your email address will not be published. Required fields are marked *