Thursday, 12th December 2024

ಆಲ್‌ರೌಂಡರ್ ಅಕ್ಷರ್ ಪಟೇಲ್ ಗುಣಮುಖ

ಮುಂಬೈ: ಕರೋನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾದ ಆಲ್‌ರೌಂಡರ್ ಅಕ್ಷರ್ ಪಟೇಲ್, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿದ್ದಾರೆ.

ಎಡಗೈ ಆಫ್ ಸ್ಪಿನ್ ಬೌಲಿಂಗ್ ಹಾಗೂ ಕೆಳ ಕ್ರಮಾಂಕದಲ್ಲಿ ಉಪಯುಕ್ತ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಅಕ್ಷರ್ ಹೊಂದಿದ್ದಾರೆ. ಇದು ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಡೆಲ್ಲಿ ಬಲವರ್ಧನೆಗೆ ನೆರವಾಗಲಿದೆ.

27 ವರ್ಷದ ಅಕ್ಷರ್ ಪಟೇಲ್ ಮಾರ್ಚ್ 28ರಂದು ನೆಗೆಟಿವ್ ವರದಿಯೊಂದಿಗೆ ಮುಂಬೈ ತಲುಪಿದ್ದರು. ಬಳಿಕ ನಡೆಸಿದ್ದ ಪರೀಕ್ಷೆ ಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿತ್ತು.