Thursday, 19th September 2024

Bangladesh Team: ಭಾರತ ವಿರುದ್ಧದ ಟೆಸ್ಟ್‌ ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದ ಬಾಂಗ್ಲಾದೇಶ

Bangladesh Team

ಢಾಕಾ: ಆತಿಥೇಯ ಭಾರತ ವಿರುದ್ಧದ 2 ಪಂದ್ಯಗಳ ಟೆಸ್ಟ್‌ ಸರಣಿಗಾಗಿ ಬಾಂಗ್ಲಾದೇಶ(Bangladesh Team) ಕ್ರಿಕೆಟ್‌ ಮಂಡಳಿ ಗುರುವಾರ 16 ಸದಸ್ಯರ ಬಲಿಷ್ಠ ತಂಡವನ್ನ ಪ್ರಕಟಿಸಿದೆ. ಇತ್ತೀಚೆಗಷ್ಟೇ ಪಾಕಿಸ್ತಾನವನ್ನು ಅವರದ್ದೇ ನೆಲದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿ ಸರಣಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಬಾಂಗ್ಲಾ ಭಾರತಕ್ಕೆ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ.

ತೊಡೆಸಂದು ಗಾಯದಿಂದಾಗಿ ಪಾಕ್‌ ಸರಣಿಯಿಂದ ಹೊರಗುಳಿದಿದ್ದ ಆರಂಭಿಕ ಆಟಗಾರ ಮಹ್ಮದುಲ್ ಹಸನ್ ಜಾಯ್ ಮತ್ತೆ ತಂಡ ಸೇರಿದ್ದಾರೆ. ಆದರೆ, ಎಡಗೈ ಸೀಮರ್ ಶೋರಿಫುಲ್ ಇಸ್ಲಾಮ್ ಗಾಯದಿಂದಾಗಿ ಸರಣಿಯಿಂದ ಹೊರಗುಳಿದಿದ್ದಾರೆ. ಶಾರಿಫುಲ್ ಲಾಹೋರ್‌ನಲ್ಲಿ ಪಾಕಿಸ್ತಾನದ ವಿರುದ್ಧ ಆರಂಭಿಕ ಟೆಸ್ಟ್‌ನಲ್ಲಿ ಆಡಿದ್ದರು. ಬಾಬರ್ ಅಜಮ್ ಸೇರಿದಂತೆ ಮೂರು ವಿಕೆಟ್‌ಗಳನ್ನು ಪಡೆದಿದ್ದರು. ಬಳಿಕ ತೊಡೆಸಂದು ಗಾಯಕ್ಕೆ ತುತ್ತಾಗಿ ದ್ವಿತೀಯ ಟೆಸ್ಟ್‌ನಿಂದ ಹೊರಬಿದ್ದಿದ್ದರು. ಗುಣಮುಖರಾಗದ ಕಾರಣ ಭಾರತ ವಿರುದ್ಧವೂ ಅವರು ಆಡುತ್ತಿಲ್ಲ ಎಂದು ಬಾಂಗ್ಲಾ ಕ್ರಿಕೆಟ್‌ ಮಂಡಳಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಇದನ್ನೂ ಓದಿ Team India: ಇಂದು ಚೆನ್ನೈಗೆ ಭಾರತ ತಂಡ ಆಗಮನ; ನಾಳೆಯಿಂದ ಅಭ್ಯಾಸ ಆರಂಭ

ಜೇಕರ್ ಅಲಿ ಅನಿಕ್ ಬಾಂಗ್ಲಾದೇಶದ ಪರ ಚೊಚ್ಚಲ ಟೆಸ್ಟ್ ಕರೆ ಪಡೆದರು. 26 ವರ್ಷದ ವಿಕೆಟ್‌ಕೀಪರ್-ಬ್ಯಾಟರ್ ಆಗಿರುವ ಅವರು ಟೆಸ್ಟ್ ತಂಡದಲ್ಲಿ ಏಕೈಕ ಅನ್‌ಕ್ಯಾಪ್ಡ್ ಆಟಗಾರರಾಗಿದ್ದಾರೆ. ಬಾಂಗ್ಲಾ ಪರ 17 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ.

ಬಾಂಗ್ಲಾ ಟೆಸ್ಟ್‌ ತಂಡ

ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ಮಹಮ್ಮದುಲ್ ಹಸನ್ ಜಾಯ್, ಝಾಕಿರ್ ಹಸನ್, ಶದ್ಮಾನ್ ಇಸ್ಲಾಂ, ಮೊಮಿನುಲ್ ಹಕ್, ಮುಶ್ಫಿಕರ್ ರಹೀಮ್, ಶಾಕಿಬ್ ಅಲ್ ಹಸನ್, ಲಿಟ್ಟನ್ ಕುಮಾರ್ ದಾಸ್, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ನಯೀಮ್ ಹಸನ್, ನಹಿದ್ ರಾಣಾ, ಹಸನ್ ಮಹಮ್ಮದ್, ತಾಸ್ ಮಹಮ್ಮದ್ ಸೈಯದ್ ಖಲೀದ್ ಅಹ್ಮದ್, ಜಾಕರ್ ಅಲಿ ಅನಿಕ್.

ನಾಳೆಯಿಂದ ಭಾರತ ತಂಡ ಅಭ್ಯಾಸ

ಭಾರತ ತಂಡದ(Team India) ಆಟಗಾರರು ಇಂದು (ಗುರುವಾರ) ಚೆನ್ನೈಗೆ ಆಗಮಿಸಿ ನಾಳೆ(ಸೆಪ್ಟೆಂಬರ್‌ 13)ಯಿಂದ ನಗರದ ಚೆಪಾಕ್‌ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಲಿದ್ದಾರೆ. ಆಟಗಾರರು 6 ದಿನಗಳ ಕಾಲ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಮೊದಲ ಪಂದ್ಯಕ್ಕೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಯಶ್ ದಯಾಳ್.