Saturday, 14th December 2024

ಬಾಂಗ್ಲಾದೇಶ ಕ್ರಿಕೆಟಿಗನ ಹೇಳಿಕೆಗೆ ಮಹಿಳಾ ಸಂಘಟನೆಗಳ ಆಕ್ರೋಶ..!

ಢಾಕಾ: ಹೆಂಡತಿ ಕೆಲಸಕ್ಕೆ ಹೋದರೆ ಗಂಡಿನ ಜೀವನ ಸರ್ವನಾಶ ಎಂಬರ್ಥದಲ್ಲಿ ಬಾಂಗ್ಲಾದೇಶ ಕ್ರಿಕೆಟಿಗ ಹೇಳಿಕೆ ನೀಡಿದ್ದು ಇದೀಗ ಬಾಂಗ್ಲಾದೇಶದಲ್ಲಿ ಮಹಿಳಾ ಸಂಘಟನೆಗಳ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಏಷ್ಯಾಕಪ್ ಕ್ರಿಕೆಟ್ ನಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ತಮ್ಮ ನಾಲ್ಕನೇ ಎಸೆತದಲ್ಲೇ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ವಿಕೆಟ್ ಪಡೆದು ಮಿಂಚಿದ್ದ ಬಾಂಗ್ಲಾದೇಶ ಬೌಲರ್ ತಂಜಿಮ್ ಹಸನ್ ಸಾಕಿಬ್ ಹೇಳಿಕೆ ಇರುವ ಪೋಸ್ಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಮಹಿಳಾ ಮಣಿಯರ ಕೆಂಗಣ್ಣಿಗೆ ತುತ್ತಾಗಿದೆ.

20 ವರ್ಷ ವಯಸ್ಸಿನ ತಂಜಿಮ್ ಹಸನ್ ಸಾಕಿಬ್ ತನ್ನ ಪೋಸ್ಟ್ ನಲ್ಲಿ “ಹೆಂಡತಿ ಕೆಲಸಕ್ಕೆ ಹೋದರೆ, ಗಂಡನ ಹಕ್ಕುಗಳು ಖಾತ್ರಿಯಾಗುವುದಿಲ್ಲ”.. “ಹೆಂಡತಿ ದುಡಿದರೆ ಮಗುವಿನ ಹಕ್ಕು ಖಾತ್ರಿಯಾಗುವುದಿಲ್ಲ, ಹೆಂಡತಿ ದುಡಿದರೆ ಸೊಬಗು ಕೆಡುತ್ತದೆ, ಹೆಂಡತಿ ದುಡಿದರೆ ಸಂಸಾರ ಹಾಳಾಗುತ್ತದೆ, ಹೆಂಡತಿ ದುಡಿದರೆ ಮುಸುಕು ಹಾಳಾಗುತ್ತದೆ, ಹೆಂಡತಿ ದುಡಿದರೆ ಸಮಾಜ ಹಾಳಾಗುತ್ತದೆ ಮತ್ತು ಹಾಳಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.