Thursday, 19th September 2024

Babar Azam : ಮೊದಲು ಮದುವೆಯಾಗು, ಚೆನ್ನಾಗಿ ಆಡಬಹುದು; ಪಾಕ್‌ ನಾಯಕ ಅಜಂಗೆ ಸಲಹೆ ಕೊಟ್ಟ ಮಾಜಿ ಆಟಗಾರ

Babar Azam

ಬೆಂಗಳೂರು: ಪಾಕಿಸ್ತಾನ ತಂಡದ ನಾಯಕ, 29ರ ವರ್ಷದ ಕ್ರಿಕೆಟಿಗ ಬಾಬರ್ ಅಜಾಮ್‌ (Babar Azam) ಕಳಪೆ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗೆ ಬಾಂಗ್ಲಾದೇಶ ಟೆಸ್ಟ್ ಸರಣಿಯಲ್ಲಿ ಅವರು ಕೇವಲ 64 ರನ್ ಗಳಿದ್ದರು. ಅದೇ ರೀತಿ ಪಾಕಿಸ್ತಾನವು ತಮ್ಮ ತವರು ನೆಲದಲ್ಲಿ 0-2 ಅಂತರದಿಂದ ಹೀನಾಯ ಸರಣಿ ಸೋಲು ಅನುಭವಿಸಿತ್ತು. ಇದೇ ಮೊದಲ ಬಾರಿಗೆ ಬಾಂಗ್ಲಾದೇಶವು ಪಾಕಿಸ್ತಾನವನ್ನು ಟೆಸ್ಟ್ ಮತ್ತು ಟೆಸ್ಟ್ ಸರಣಿಯಲ್ಲಿ ಸೋಲಿಸಿ ದಾಖಲೆ ಬರೆದಿದೆ. ಈ ಸೋಲಿನ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರನ್ನು ಮಾಜಿ, ಹಾಲಿ ಆಟಗಾರರು ಹಾಗೂ ವಿಶ್ಲೇಷಕರು ಬೆಂಡೆತ್ತುತ್ತಿದ್ದಾರೆ. ಪ್ರಮುಖವಾಗಿ ನಾಯಕ ಬಾಬರ್ ಅಜಂ ಬಗ್ಗೆ ಹೆಚ್ಚಿನ ಕಾಳಜಿ ವ್ಯಕ್ತಗೊಳ್ಳುತ್ತಿವೆ. ಅಗತ್ಯ ಸಮಯದಲ್ಲಿ ಬ್ಯಾಟ್ ಬೀಸದ ಅವರ ಬಗ್ಗೆ ಬೇಸರ ವ್ಯಕ್ತಗೊಳ್ಳುತ್ತಿವೆ.

ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಮತ್ತು ತಜ್ಞರು ಬಾಬರ್ ಅವರ ಕಳಪೆ ಪ್ರದರ್ಶನವನ್ನು ನಿರಂತರವಾಗಿ ಟೀಕಿಸುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಪ್ರದರ್ಶನವು ವಿಶೇಷವಾಗಿ ನಿರಾಶಾದಾಯಕ ಎಂದಿದ್ದಾರೆ. 2022ರ ಡಿಸೆಂಬರ್‌ನಲ್ಲಿ ಕರಾಚಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಅರ್ಧಶತಕ ಬಾರಿಸಿರುವ ಬಾಬರ್ ಬಗ್ಗೆ ಬೇಸರದ ನುಡಿಗಳು ಕೇಳಿಬರುತ್ತಿವೆ.

ಈ ಮಧ್ಯೆ, ಪಾಕಿಸ್ತಾನದ ಮಾಜಿ ಬ್ಯಾಟ್ಸ್ಮನ್ ಬಾಸಿತ್ ಅಲಿ ಅವರು ಬಾಬರ್ ಅಜಮ್‌ಗೆ ಫಾರ್ಮ್ ಹೆಚ್ಚಿಸಲು ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವರು ಕ್ರಿಕೆಟಿಗನಿಗೆ ಮದುವೆಯಾಗುವಂತೆ ಹೇಳಿದ್ದಾರೆ. ಅದರಿಂದ ಫಾರ್ಮ್‌ ಹೆಚ್ಚಾಗಿ ಚೆನ್ನಾಗಿ ಆಡಬಹುದು ಎಂದಿದ್ದಾರೆ. ಮದುವೆಯಾದರೆ ಬಾಬರ್ ಅಜಮ್ ಅವರ ಅದೃಷ್ಟ ಬದಲಾಯಿಸುತ್ತದೆ. ಅವರು ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿಯಾಗಬಹುದು ಎಂದು ಬಾಸಿತ್ ಭಾವಿಸಿದ್ದಾರೆ.

“ಉತ್ತಮ ಪ್ರದರ್ಶನ ನೀಡದಿದ್ದಾಗ ಆಟಗಾರನು ಹೇಗೆ ಭಾವಿಸುತ್ತಾನೆಂದು ನನಗೆ ಗೊತ್ತು. ಬಾಬರ್‌ನ ಹೆತ್ತವರು ಆತನಿಗೆ ಮದುವೆಯಾಗುವಂತೆ ಹೇಳಬೇಕು. ಹಿರಿಯ ಸಹೋದರನಂತೆ, ನಾನು ಅವರಿಗೆ ಹೇಳಲು ಬಯಸುತ್ತೇನೆ, ‘ಶಾದಿ ಕರ್ ಲೇ ಭಾಯ್, ಅಬ್ ಉಮರ್ ಜ್ಯಾದಾ ಹೋ ಗಯಿ ಹೈ ತೇರಿ’ (ಮದುವೆಯಾಗು ಸಹೋದರ, ನಿಮಗೆ ಈಗ ಸಾಕಷ್ಟು ವಯಸ್ಸಾಗಿದೆ)” ಎಂದು ಬಾಸಿತ್ ಅಲಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಅರ್ಧ ಶತಕವಿಲ್ಲದ ಬಾಬರ್ ಅಜಂ ಅವರ 16 ಟೆಸ್ಟ್ ಇನ್ನಿಂಗ್ಸ್‌ಗಳ ಕುಸಿತವು ಅಭಿಮಾನಿಗಳು ಮತ್ತು ವೀಕ್ಷಕ ವಿವರಣೆಗಾರರಿಗೆ ಆಘಾತಕಾರಿಯಾಗಿದೆ. ಬಾಸಿತ್ ಅವರ ವಿಧಾನವು ಕಷ್ಟದ ಸಮಯದಲ್ಲಿ ಉನ್ನತ ಕ್ರೀಡಾಪಟುಗಳು ಎದುರಿಸುವ ಮಾನಸಿಕ ಮತ್ತು ಭಾವನಾತ್ಮಕ ಸವಾಲುಗಳನ್ನು ಒತ್ತಿಹೇಳುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Shubman Gill : ಕೊಹ್ಲಿ ಅಲ್ಲ, ಟೀಮ್ ಇಂಡಿಯಾದಲ್ಲಿ ತಮ್ಮ ಬೆಸ್ಟ್‌ ಫ್ರೆಂಡ್ ಯಾರೆಂದು ತಿಳಿಸಿದ ಶುಬ್ಮನ್‌ ಗಿಲ್‌

ಪಾಕಿಸ್ತಾನ ತಂಡದ ತಮ್ಮ ಮುಂದಿನ ಅಭಿಯಾನದಲ್ಲಿ ಪ್ರಸ್ತುತ ಅದ್ಭುತ ಫಾರ್ಮ್ ನಲ್ಲಿರುವ ಪ್ರಬಲ ಇಂಗ್ಲೆಂಡ್ ತಂಡದ ವಿರುದ್ಧ ಕಠಿಣ ಪರೀಕ್ಷೆ ಎದುರಿಸಲಿದೆ. 2022ರಲ್ಲಿ ಕೊನೆಯ ಬಾರಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್ ತಂಡ ಪಾಕಿಸ್ತಾನ 3-0 ಅಂತರದಿಂದ ಮಣಿಸಿತ್ತು. ಪಾಕಿಸ್ತಾನ ತನ್ನ ಅಗ್ರ ಬ್ಯಾಟರ್‌ ಬಾಬರ್ ಶೀಘ್ರದಲ್ಲೇ ಫಾರ್ಮ್‌ಗೆ ಮರಳುತ್ತಾರೆ ಎಂದು ಆಶಿಸಿದೆ.