ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ 89ನೇ ವಾರ್ಷಿಕ ಸಾಮಾನ್ಯ ಸಭೆಗೆ ದಿನಾಂಕವನ್ನು ನಿಗದಿಗೊಳಿಸ ಲಾಗಿದೆ. ಡಿ.24ರಂದು ಸಭೆ ನಡೆಯಲಿದ್ದು ಸಭೆ ನಡೆಯಲಿರುವ ಸ್ಥಳವನ್ನು ಶೀಘ್ರದಲ್ಲೇ ತಿಳಿಸುವುದಾಗಿ ಹೇಳಿಕೊಂಡಿದೆ.
ಐಪಿಎಲ್ಗೆ ಸೇರ್ಪಡೆಗೊಳ್ಳುವ ಎರಡು ಹೊಸ ತಂಡಗಳ ವಿಚಾರ ಹಾಗೂ ಒಲಿಂಪಿಕ್ಸ್ಗೆ ಕ್ರಿಕೆಟ್ ಸೇರ್ಪಡೆಗೊಳಿಸುವ ವಿಚಾರ ಈ ಬಾರಿಯ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಲಿರುವ ಮಹತ್ವದ ವಿಚಾರಗಳಾಗಿದೆ.
ಬಿಸಿಸಿಐ ಕಾರ್ಯದರ್ಶಿ ಜೈ ಶಾ, “89ನೇ ವಾರ್ಷಿಕ ಸಾಮಾನ್ಯ ಸಭೆಗೆ ನೋಟಿಸ್ಅನ್ನು ಕಳುಹಿಸಲಾಗಿದೆ. ಬಿಸಿಸಿಐ ಈ ಸಭೆಯನ್ನು ಡಿ.24ರಂದು ನಡೆಸಲಿದೆ. ಈ ಕೆಳಗಿನ ವಿಚಾರಗಳು ಅಲ್ಲಿ ಪ್ರಮುಖವಾಗಿ ಚರ್ಚೆಯಾಗಲಿದೆ”.