Friday, 25th October 2024

ಗಾಯದ ಸಮಸ್ಯೆ: ಐಪಿಎಲ್‌ ಟೂರ್ನಿಯಿಂದ ಬೆನ್ ಸ್ಟೋಕ್ಸ್ ಔಟ್‌

ಬೆಂಗಳೂರು: ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಿಂದ ರಾಜಸ್ಥಾನ್ ರಾಯಲ್ಸ್ ತಂಡದ ಆಲ‌್ ರೌಂಡರ್ ಆಟಗಾರ ಬೆನ್ ಸ್ಟೋಕ್ಸ್ ಹೊರಗುಳಿಯಲಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ದ ಪಂದ್ಯದಲ್ಲಿ ಎಡಗೈ ಬೆರಳಿನ ಗಾಯದ ಸಮಸ್ಯೆಗೆ ಸಿಲುಕಿರುವ ಸ್ಟೋಕ್ಸ್, ಆಟವಾಡಲು ಲಭ್ಯರಿರುವು ದಿಲ್ಲ. ಏ.12ರಂದು ನಡೆದಿದ್ದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಕ್ರಿಸ್ ಗೇಲ್ ಅವರ ಬೌಂಡರಿಗೆ ಅಟ್ಟಿದ ಬಾಲ್ ಕ್ಯಾಚ್ ಹಿಡಿಯುವ ಯತ್ನದಲ್ಲಿ, ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಲ್‌ರೌಂಡರ್ ಆಗಿದ್ದ ಬೆನ್ ಸ್ಟೋಕ್ಸ್ ನಿರ್ಗಮನ ತಂಡಕ್ಕೆ ಹಿನ್ನಡೆ ತರಲಿದೆ. ಆಟವಾಡಲು ಸಾಧ್ಯವಾಗದಿದ್ದರೂ, ಬೆನ್ ತಂಡದ ಜತೆಗೇ ಇರಲಿದ್ದು, ಪಂದ್ಯದ ಕುರಿತು ಸಲಹೆ ಸೂಚನೆ ನೀಡಲಿದ್ದಾರೆ.

ರಾಜಸ್ಥಾನ್ ರಾಯಲ್ಸ್ ಜತೆಗಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ 222 ಬೃಹತ್ ಮೊತ್ತ ಪೇರಿಸಿತ್ತು.