Saturday, 14th December 2024

ಬಿಎಫ್‌ಸಿ-ಬ್ಲಾಸ್ಟರ್ಸ್ ಕಾದಾಟ ಇಂದು

ಬೆಂಗಳೂರು:
ತವರು ಅಭಿಮಾನಿಗಳ ಬಲದೊಂದಿಗೆ ಆತಿಥೇಯ ಬೆಂಗಳೂರು ಎಫ್.ಸಿ ತಂಡ ಇಂದು ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಕೇರಳ ಬ್ಲಾಾಸ್ಟರ್ಸ್ ವಿರುದ್ಧ ಸೆಣಸಾಟ ನಡೆಸಲಿದೆ.
ಟೂರ್ನಿಯಲ್ಲಿ ಆಡಿರುವ 4 ಪಂದ್ಯಗಳಲ್ಲಿ ಒಂದು ಜಯ ಹಾಗೂ ಮೂರು ಡ್ರಾಾ ಸಾಧಿಸಿರುವ ಬಿಎಫ್‌ಸಿ ಆರು ಅಂಕಗಳೊಂದಿಗೆ ಅಂಕ ಪಟ್ಟಿಿಯಲ್ಲಿ ಐದನೇ ಸ್ಥಾಾನದಲ್ಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಪೂರ್ಣ ಅಂಕ ಕಲೆ ಹಾಕುವ ಕನಸು ಬ್ಲ್ಯೂ ಬಾಯ್ಸ್ ತಂಡದ್ದಾಗಿದೆ. ಕೇರಳ ಬ್ಲಾಾಸ್ಟರ್ಸ್ ಆಡಿರುವ ನಾಲ್ಕು ಪಂದ್ಯಗಳಲ್ಲಿ ನಾಲ್ಕು ಅಂಕ ಕಲೆ ಹಾಕಿದ್ದು, ಏಳನೇ ಸ್ಥಾಾನದಲ್ಲಿದೆ.

ಚೆನ್ನೈ ಎಫ್.ಸಿ ವಿರುದ್ಧ ತವರಿನಲ್ಲಿ ಭರ್ಜರಿ ಜಯ ದಾಖಲಿಸಿರುವ ಬೆಂಗಳೂರು ತಂಡ, ಮತ್ತೊೊಂದು ಗೆಲುವಿನ ತೋರಣ ಕಟ್ಟಲು ಸಿದ್ಧತೆ ನಡೆಸಿದೆ. ಟೂರ್ನಿಯಲ್ಲಿ ಸ್ಥಿಿರ ಪ್ರದರ್ಶನ ತೋರುತ್ತಿಿರುವ ಬಿ.ಎಫ್.ಸಿ ರಕ್ಷಣಾ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಾಸದಲ್ಲಿದೆ. ಆರಂಭದಲ್ಲಿ ಗೋಲು ದಾಖಲಿಸಿ ಎದುರಾಳಿ ತಂಡಕ್ಕೆೆ ಪೆಟ್ಟು ನೀಡುವ ಆಸೆ ಸುನಿಲ್ ಪಡೆ ಯೋಜನೆಯಾಗಿದೆ.

ಬೆಂಗಳೂರು ಪರ ಎರಿಕ್ ಪಾರ್ಥಲು, ಸೆಂಬೊಯ್ ಹಾಕಿಪ್ ತಲಾ ಒಂದು ಗೋಲು ಸಿಡಿಸಿದ್ದಾರೆ. ಆತಿಥೇಯ ತಂಡದ ಗೋಲ್ ಕೀಪರ್ ಗುಪ್ರಿಿತ್ ಸಿಂಗ್ ಸಂಧು ನಾಲ್ಕು ಪಂದ್ಯಗಳಲ್ಲಿ ಏಳು ಗೋಲುಗಳನ್ನು ರಕ್ಷಿಿಸಿದ್ದಾಾರೆ.
ಕೇರಳ ತಂಡದ ಪರ ಬಾರ್ತಲೋಮೆವ್ ಒಗ್ಬೆೆಚೆ ಗೋಲು ಗಳಿಕೆಯಲ್ಲಿ ಮುನ್ನಡೆ ಹೊಂದಿದ್ದಾರೆ. ಗೋಲ್ ಗಳನ್ನು ತೆಡಯುವ ವಿಚಾರದಲ್ಲಿ ದೇವರ ನಾಡಿನ ಟಿ.ಪಿ.ರೆಹನೇಶ್, ಬಿಲಾಲ್ ಹುಸೈನ್ ಖಾನ್ ಸಹ ಮುಂಚೂಣಿಯಲ್ಲಿದ್ದಾರೆ.