Friday, 22nd November 2024

BGT 2024-25: ಮಿಚೆಲ್‌ ಸ್ಟಾರ್ಕ್‌ ಅಲ್ಲ, ಜಸ್‌ಪ್ರೀತ್‌ ಬುಮ್ರಾ ವಿಶ್ವದ ಶ್ರೇಷ್ಠ ಬೌಲರ್‌ ಎಂದ ವಸೀಮ್‌ ಅಕ್ರಮ್‌!

Wasim Akram in awe of 'world's best' Jasprit Bumrah after Perth Test masterclass

ಪರ್ತ್‌: ಆಸ್ಟ್ರೇಲಿಯಾ ವಿರುದ್ದ ಮೊದಲನೇ ಟೆಸ್ಟ್‌ (BGT 2024-25) ಪಂದ್ಯದಲ್ಲಿ ಮಾರಕ ಬೌಲಿಂಗ್‌ ದಾಳಿ ನಡೆಸಿದ ಭಾರತ ತಂಡದ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರನ್ನು ಪಾಕಿಸ್ತಾನ ಮಾಜಿ ವೇಗಿ ವಸೀಮ್‌ ಅಕ್ರಮ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಟೆಸ್ಟ್‌, ಒಡಿಐ ಹಾಗೂ ಟಿ20 ಸೇರಿದಂತೆ ಮೂರೂ ಸ್ವರೂಪಗಳಲ್ಲಿ ಜಸ್‌ಪ್ರೀತ್‌ ಬುಮ್ರಾ ವಿಶ್ವದ ಅತ್ಯುತ್ತಮ ಬೌಲರ್‌ ಆಗಿದ್ದಾರೆಂದು ಹೊಗಳಿದ್ದಾರೆ.

ಇಲ್ಲಿನ ಆಪ್ಟಸ್‌ ಸ್ಟೇಡಿಯಂನಲ್ಲಿ ಶುಕ್ರವಾರ ಆರಂಭವಾದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 150 ರನ್‌ಗಳಿಗೆ ಆಲ್‌ಔಟ್‌ ಆಯಿತು. ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ ತಂಡ ಮೊದಲನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್‌ಗಳ ನಷ್ಟಕ್ಕೆ 67 ರನ್‌ಗಳನ್ನು ಗಳಿಸಿದೆ. ಭಾರತದ ಪರ ಮಾರಕ ದಾಳಿ ನಡೆಸಿದ ಜಸ್‌ಪ್ರೀತ್‌ ಬುಮ್ರಾ 4 ವಿಕೆಟ್‌ಗಳನ್ನು ಕಿತ್ತು ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದಾರೆ.

ಸ್ಟಾರ್‌ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ವಸೀಮ್‌ ಅಕ್ರಮ್‌, “ಜಸ್‌ಪ್ರೀತ್‌ ಬುಮ್ರಾ ಅವರು ಅಗ್ರ ಆಟವನ್ನು ಹೊಂದಿದ್ದಾರೆ ಹಾಗೂ ಅವರು ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳನ್ನು ಬುದ್ದಿವಂತಿಕೆಯಿಂದ ಅವಲೋಕಿಸುತ್ತಿದ್ದಾರೆ. ಇಲ್ಲಿನ ಕಂಡೀಷನ್ಸ್‌ ಅರ್ಥಮಾಡಿಕೊಳ್ಳುವಲ್ಲಿ ಮತ್ತು ದೌರ್ಬಲ್ಯವನ್ನು ಬಳಸಿಕೊಳ್ಳುವಲ್ಲಿ ಅವರ ಬೌಲಿಂಗ್‌ ಸ್ಪೆಲ್‌ ಮಾಸ್ಟರ್‌ಕ್ಲಾಸ್ ಆಗಿತ್ತು,” ಎಂದು ಗುಣಗಾಣ ಮಾಡಿದ್ದಾರೆ.

IND vs AUS: 150 ರನ್‌ಗೆ ಕುಸಿದ ಟೀಮ್‌ ಇಂಡಿಯಾ

ವಿಶ್ವದ ಅತ್ಯುತ್ತಮ ಬೌಲರ್‌ ಜಸ್‌ಪ್ರೀತ್‌ ಬುಮ್ರಾ

“ಮೂರೂ ಸ್ವರೂಪದಲ್ಲಿಯೂ ಜಸ್‌ಪ್ರೀತ್‌ ಬುಮ್ರಾ ವಿಶ್ವದ ಶ್ರೇಷ್ಠ ಬೌಲರ್‌. ನಿಯಂತ್ರಣ, ಸ್ವಿಂಗ್‌, ವೇಗ, ಕ್ರೀಸ್‌ ಅನ್ನು ಬಳಸಿಕೊಳ್ಳುವುದರಲ್ಲಿ ಬುಮ್ರಾ ಉತ್ತಮ ದರ್ಜೆಯಲ್ಲಿದ್ದಾರೆ. ಇದರ ಸಹಾಯದಿಂದ ಅವರು ಉಸ್ಮಾನ್‌ ಖವಾಜ ಅವರನ್ನು ಔಟ್‌ ಮಾಡಿದ್ದಾರೆ. ನೋಡಲು ಅತ್ಯಂತ ಬುದ್ದಿವಂತಿಕೆಯ ಬೌಲರ್‌ ಅವರು. ಬ್ಯಾಟ್ಸ್‌ಮನ್‌ಗಳ ವೀಕ್ನೆಸ್‌ ಅನ್ನು ಅವರು ಬಹುಬೇಗ ಅರಿತುಕೊಳ್ಳುತ್ತಾರೆ ಹಾಗೂ ಹಾರ್ಡ್‌ ಶಾರ್ಟ್‌ ಬಾಲ್‌ಗಳನ್ನು ಹಾಕುವ ಮೂಲಕ ಬ್ಯಾಟ್ಸ್‌ಮನ್‌ಗಳು ಶಾರ್ಟ್‌ ಬಾಲ್‌ ಎಸೆತಗಳನ್ನು ನಿರೀಕ್ಷೆ ಮಾಡುವಂತೆ ಮಾಡುತ್ತಾರೆ. ಇವರು ಎಲ್ಲಾ ಕಡೆಯಲ್ಲಿಯೂ ಚೆಂಡನ್ನು ಪಿಚ್‌ ಮಾಡುತ್ತಾರೆ ಮತ್ತು ಚೆಂಡನ್ನು ಎರಡೂ ಕಡೆಗಳಲ್ಲಿ ಚೆಂಡನ್ನು ಸ್ವಿಂಗ್‌ ಮಾಡಬಲ್ಲರು,” ಎಂದು ಪಾಕ್‌ ದಿಗ್ಗಜ ಶ್ಲಾಘಿಸಿದ್ದಾರೆ.

ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಭಾರತ

ಪಂದ್ಯದ ಬಗ್ಗೆ ಮಾತನಾಡುವುದಾದರೆ ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಇನಿಂಗ್ಸ್‌ ಆರಂಭಿಸಿದ ಕೆಎಲ್‌ ರಾಹುಲ್‌ ಹಾಗೂ ಯಶಸ್ವಿ ಜೈಸ್ವಾಲ್‌ ಜೋಡಿಯಿಂದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಯಶಸ್ವಿ ಜೈಸ್ವಾಲ್‌ ಖಾತೆ ತೆರೆಯದೆ ವಿಕೆಟ್‌ ಒಪ್ಪಿಸಿದರೆ, ಕೆಎಲ್‌ ರಾಹುಲ್‌ 26 ರನ್‌ ಗಳಿಸಿ ವಿವಾದಾತ್ಮಕ ತೀರ್ಪಿಗೆ ಔಟ್‌ ಆದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ನಾಯಕ ವಿರಾಟ್‌ ಕೊಹ್ಲಿ, ಧ್ರುವ್‌ ಜುರೆಲ್‌ ಕೂಡ ವೈಫಲ್ಯ ಅನುಭವಿಸಿದರು. ಇದಕ್ಕೂ ಮುನ್ನ ಶುಭಮನ್‌ ಗಿಲ್‌ ಸ್ಥಾನದಲ್ಲಿ ಸಿಕ್ಕಿದ್ದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ದೇವದತ್‌ ಪಡಿಕ್ಕಲ್‌ ವಿಫಲರಾದರು.

IND vs AUS: ಜಸ್‌ಪ್ರೀತ್‌ ಬುಮ್ರಾ ಅಲ್ಲ, ಭಾರತ ತಂಡಕ್ಕೆ ಕೀ ಬೌಲರ್‌ ಹೆಸರಿಸಿದ ನೇಥನ್‌ ಲಯಾನ್‌!

ಆದರೆ, ರಿಷಭ್‌ ಪಂತ್‌(37 ರನ್‌ಗಳು) ಹಾಗೂ ಡೆಬ್ಯೂಟಂಟ್‌ ನಿತೀಶ್‌ ಕುಮಾರ್‌ ರೆಡ್ಡಿ (41 ರನ್‌ಗಳು) ಅವರ ಬ್ಯಾಟಿಂಗ್‌ ಬಲದಿಂದ ಭಾರತ ತಂಡ 100ರ ಗಡಿ ದಾಟಲು ಸಾಧ್ಯವಾಯಿತು. ಅಂತಿಮವಾಗಿ ಭಾರತ ತಂಡ, ತನ್ನ ಪ್ರಥಮ ಇನಿಂಗ್ಸ್‌ ಅನ್ನು 150 ರನ್‌ಗಳಿಗೆ ಮುಗಿಸಿತು. ಬಳಿಕ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ ತಂಡವನ್ನು ಜಸ್‌ಪ್ರೀತ್‌ ಬುಮ್ರಾ ( 17 ಕ್ಕೆ 4) ಹಾಗೂ ಮೊಹಮ್ಮದ್‌ ಸಿರಾಜ್‌ (17ಕ್ಕೆ 2) ಅವರು ಕಟ್ಟಿ ಹಾಕಿದರು. ಆ ಮೂಲಕ ಆಸೀಸ್‌ ಪ್ರಥಮ ಇನಿಂಗ್ಸ್‌ನಲ್ಲಿ ಹಿನ್ನಡೆಯ ಭೀತಿಗೆ ಸಿಲುಕಿದೆ.