Saturday, 14th December 2024

ಪ್ಯಾರಾ ಟೇಬಲ್ ಟೆನಿಸ್ ಸ್ಪರ್ಧೆ: ಚಿನ್ನ ಗೆದ್ದ ಭಾವಿನಾ ಪಟೇಲ್

ಬರ್ಮಿಂಗ್‍ಹ್ಯಾಂ: ಕಾಮನ್‍ವೆಲ್ತ್ ಕ್ರೀಡಾಕೂಟದ ಪ್ಯಾರಾ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಭಾವಿನಾ ಪಟೇಲ್ ಚಿನ್ನದ ಪದಕ ಗೆದ್ದಿದ್ದಾರೆ.

ಗುಜರಾತ್‍ನ ಭಾವಿನಾ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 12-10, 11-2, 11-9ರಿಂದ ನೈಜೀರಿಯಾದ ಇಫೆಚುಕ್ವುಡೆ ಕ್ರಿಸ್ಟಿಯಾನಾ ವಿರುದ್ಧ ಜಯ ಸಾಧಿಸಿದರು.

2011 ಪಿಟಿಟಿ ಥಾಯ್ಲೆಂಡ್ ಓಪನ್‍ನಲ್ಲಿ ವೈಯಕ್ತಿಕ ವಿಭಾಗದ ಬೆಳ್ಳಿಪದಕ ಗೆಲ್ಲುವ ಮೂಲಕ ಭಾವಿನಾ ವಿಶ್ವದಲ್ಲಿ 2ನೇ ರ‍್ಯಾಂಕ್ ಪಡೆದಿದ್ದರು. ಜತೆಗೆ 2012ರ ಏಷ್ಯನ್ ಪ್ಯಾರಾ ಟೇಬಲ್ ಟೆನಿಸ್ ಚಾಂಪಿ ಯನ್‍ ಶಿಪ್‍ನ ಕ್ಲಾಸ್-4ರಲ್ಲಿ ಬೆಳ್ಳಿಪದಕ ಪಡೆದಿದ್ದರು.

2017ರಲ್ಲಿ ಭಾವಿನಾ ಏಷ್ಯನ್ ಪ್ಯಾರಾ ಟೇಬಲ್ ಟೆನಿಸ್ ಚಾಂಪಿಯನ್‍ಶಿಪ್‍ನಲ್ಲಿ ಕಂಚಿನ ಪದಕ ಗೆದ್ದಿದ್ದರು.

ಸೊನಾಲ್‍ಬೆನ್ ಮನುಭಾಯಿ ಪಟೇಲ್ ಕೂಡಾ ಮಹಿಳಾ ಸಿಂಗಲ್ಸ್‌ನ ಕ್ಲಾಸ್ 3-5ರಲ್ಲಿ ಕಂಚಿನ ಪದಕ ಗೆದ್ದುಕೊಟ್ಟರು. ಪ್ಲೇ ಆಫ್ ಪಂದ್ಯದಲ್ಲಿ 34 ವರ್ಷದ ಭಾರತೀಯ ಆಟಗಾರ್ತಿ ಇಂಗ್ಲೆಂಡ್‍ನ ಸ್ಯೂ ಬೆಲ್ಲಿ ಅವರನ್ನು 11-5, 11-2, 11-3ರಲ್ಲಿ ಸೋಲಿಸಿದರು.