Friday, 22nd November 2024

ಟೀಂ ಇಂಡಿಯಾಗೆ 328 ರನ್ ಟಾರ್ಗೆಟ್‌: ಸಿರಾಜ್‌ಗೆ ಐದು ವಿಕೆಟ್‌

ಬ್ರಿಸ್ಬೇನ್: ಆಸ್ಟ್ರೆಲಿಯಾ ಎರಡನೇ ಇನಿಂಗ್ಸ್‌ನಲ್ಲಿ 294ಕ್ಕೆ ಆಲೌಟಾಗಿದ್ದು, ಪ್ರಥಮ ಇನ್ನಿಂಗ್ಸ್ ಮುನ್ನಡೆಯೊಂದಿಗೆ 328 ರನ್‌ ಗಳಿಸಿದೆ.  ಈ ಮೂಲಕ ಭಾರತಕ್ಕೆ ಗೆಲ್ಲಲು 328 ರನ್‌ ನಿಗದಿ ಮಾಡಿದೆ.

ಭಾರತದ ಯುವ ವೇಗಿ ಮುಹಮ್ಮದ್ ಸಿರಾಜ್ ಈ ಸರಣಿಯಲ್ಲಿ ಐದು ವಿಕೆಟ್‌ ಕಿತ್ತ ಏಕೈಕ ಬೌಲರ್‌ ಎಂಬ ಗೌರವಕ್ಕೆ ಭಾಜನ ರಾದರು. ಅಂತೆಯೇ, ಆಸೀಸ್‌ ಮೂರನೇ ಬಾರಿಗೆ ಟೆಸ್ಟ್ ಪಂದ್ಯವೊಂದರ ಎರಡೂ ಇನ್ನಿಂಗ್ಸ್‌ನಲ್ಲಿ ಆಲೌಟಾಯಿತು. ಇದಕ್ಕೂ ಮುನ್ನ 2008-09ರಲ್ಲಿ ನ್ಯೂಜಿಲೆಂಡ್‌ ವಿರುದ್ದ ಹಾಗೂ ವೆಸ್ಟ್‌ ಇಂಡೀಸ್‌ ವಿರುದ್ದ 1992/93ರಲ್ಲಿ ಆಸೀಸ್‌ ಎರಡೂ ಇನ್ನಿಂಗ್ಸ್‌ನಲ್ಲಿ ಆಲೌಟಾಗಿತ್ತು.

ನಾಲ್ಕನೇ ದಿನ ಆಸ್ಟ್ರೇಲಿಯಾ ಆರಂಭಿಕ ಆಟಗಾರರು ಭಾರತದ ಬೌಲರ್‌ಗಳ ಮೇಲೆ ಸವಾರಿ ಮಾಡುವ ಮೂಲಕ ಒತ್ತಡ ಹೇರುವ ಪ್ರಯತ್ನದಲ್ಲಿದ್ದಾಗಲೇ ಭಾರತೀಯ ಬೌಲರ್‌ಗಳು ಪರಿಣಾಮಕಾರಿ ಬೌಲಿಂಗ್‌ನಿಂದ ಅತಿಥೇಯರ ರನ್ ಧಾವಂತಕ್ಕೆ ಕಡಿವಾಣ ಹಾಕಿದರು. ಲಂಬುಶೆನ್ (26) ಮತ್ತು ಮ್ಯಾಥ್ಯೂ ವೇಡ್ (0) ಅವರ ವಿಕೆಟ್ ಪಡೆಯುವ ಮೂಲಕ ಮುಹಮ್ಮದ್ ಸಿರಾಜ್ ಭಾರತಕ್ಕೆ ಮೇಲುಗೈ ದೊರಕಿಸಿಕೊಟ್ಟರು. ಇವರಿಗೆ ಇನ್ನೋರ್ವ ವೇಗಿ ಶಾರ್ದೂಲ್‌ ಉತ್ತಮ ಬೆಂಬಲ ನೀಡಿದರು.

ನಾಲ್ಕನೇ ದಿನದಾಟ ಮುಗಿಯಲು ಇನ್ನೂ 25 ಓವರ್‌ ಆಟ ಬಾಕಿಯಿದೆ.