Sunday, 15th December 2024

ಫೀಫಾ ವಿಶ್ವಕಪ್ ವೀಕ್ಷಿಸಲು 23 ಲಕ್ಷ ರೂ. ಮನೆ ಖರೀದಿ

ಕೊಚ್ಚಿ: ಫೀಫಾ ವಿಶ್ವಕಪ್(FIFA World Cup) 2022 ಹವಾ ಜೋರಾಗಿದೆ.

ಕೇರಳದ 17 ಫುಟ್‌ಬಾಲ್ ಅಭಿಮಾನಿಗಳ ಗುಂಪು ಒಟ್ಟಾಗಿ ಪಂದ್ಯಗಳನ್ನು ವೀಕ್ಷಿಸಲು ಮನೆಯೊಂದನ್ನು 23 ಲಕ್ಷ ರೂ. ಕೊಟ್ಟು ಖರೀದಿಸಿದೆ.

ಕೇರಳದ ಕೊಚ್ಚಿ ಜಿಲ್ಲೆಯ ಮುಂಡಕ್ಕಮುಗಲ್ ಎಂಬ ಸಣ್ಣ ಹಳ್ಳಿಯ 17 ಮಂದಿ ನಿವಾಸಿ ಗಳು ಫುಟ್‌ಬಾಲ್ ಪಂದ್ಯಗಳನ್ನು ಒಟ್ಟಾಗಿ ವೀಕ್ಷಿಸಲು 23 ಲಕ್ಷ ರೂ. ಕೊಟ್ಟು ಮನೆ ಖರೀದಿಸಿದೆ. ಒಂದೇ ಸೂರಿನಡಿ ಆಟಗಳನ್ನು ವೀಕ್ಷಿಸಬಹುದಾಗಿದೆ. ಕಳೆದ 15-20 ವರ್ಷ ಗಳಿಂದ ಒಟ್ಟಿಗೇ ಕೂತು ಫುಟ್ಬಾಲ್ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸುತ್ತಿರುವ ಇವರು, ಈ ಬಾರಿ ಮನೆಯನ್ನೇ ಖರೀದಿಸಿದೆ.

ಹೊಸದಾಗಿ ಖರೀದಿಸಿದ ಮನೆಗೆ ವಿಶ್ವಕಪ್‌ನಲ್ಲಿ ಭಾಗವಹಿಸುವ 32 ತಂಡಗಳ ಜೊತೆಗೆ, ಫುಟ್‌ಬಾಲ್ ತಾರೆಗಳಾದ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೋ ರೊನಾಲ್ಡೊ ಸೇರಿದಂತೆ ಆಟದ ಕೆಲವು ಸಕ್ರಿಯರ ಭಾವಚಿತ್ರಗಳೊಂದಿಗೆ ಅಲಂಕರಿಸಿದ್ದಾರೆ ಮತ್ತು ಪಂದ್ಯ ವೀಕ್ಷಿಸಲು ದೂರದರ್ಶನದ ದೊಡ್ಡ ಪರದೆಯನ್ನು ಅಳವಡಿಸಿದ್ದಾರೆ.

FIFA ವಿಶ್ವಕಪ್ 2022 ಕತಾರ್‌ನಲ್ಲಿ ನ.20ರಿಂದ ಡಿಸೆಂಬರ್‌ 18ರವರೆಗೆ ನಡೆಯಲಿದೆ.