Saturday, 5th October 2024

ಸ್ವಿಟ್ಜರ್ಲೆಂಡ್ ವಿರುದ್ಧ ಗೆದ್ದ ಬ್ರೆಜಿಲ್‌

ದೋಹಾ: ಬ್ರೆಜಿಲ್ ಫಿಫಾ ವಿಶ್ವಕಪ್‌ 2022ರಲ್ಲಿ ಗೆಲುವಿನ ಓಟವನ್ನು ಮುಂದುವರೆಸಿದೆ. ದೋಹಾದ ಸ್ಟೇಡಿಯಂ 974 ರಲ್ಲಿ ನಡೆದ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್ ವಿರುದ್ಧ 1-0 ಗೆಲುವಿ ನೊಂದಿಗೆ 16 ರ ಸುತ್ತಿನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಬ್ರೆಜಿಲ್‌ನ ಕ್ಯಾಸೆಮಿರೊ ಏಕೈಕ ಗೋಲು ಗಳಿಸುವ ಮೂಲಕ ತಂಡಕ್ಕೆ 3 ಅಂಕಗಳನ್ನು ತಂದುಕೊಟ್ಟರು. ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಬ್ರೆಜಿಲ್ 16ರ ಸುತ್ತಿಗೆ ಪ್ರವೇಶಿಸಲು ಅರ್ಹತೆ ಗಿಟ್ಟಿಸಿಕೊಂಡಿತು. ಫ್ರಾನ್ಸ್‌ ಬಳಿಕ ಎರಡನೇ ತಂಡವಾಗಿ ಅಂತಿಮ 16ರ ಸುತ್ತಿಗೆ ಪ್ರವೇಶ ಪಡೆದಿದೆ.

ಪಂದ್ಯದ 83ನೇ ನಿಮಿಷದಲ್ಲಿ ಬ್ರೆಜಿಲ್‌ನ ಕ್ಯಾಸೆಮಿರೊ ಗೋಲು ಬಾರಿಸುವ ಮೂಲಕ ಮೈದಾನದಲ್ಲಿ ಮಿಂಚು ಹರಿಸಿದರು. ಬ್ರೆಜಿಲ್ ಗೋಲು ಬಾರಿಸುತ್ತಿದ್ದಂತೆ, ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.

ಕೊನೆಯವರೆಗೂ ಉತ್ತಮ ಹೋರಾಟ ನೀಡಿದ ಸ್ವಿಟ್ಜರ್ಲೆಂಡ್ ಪಂದ್ಯದ ಮುಕ್ತಾಯಕ್ಕೆ ಕೆಲವೇ ನಿಮಿಷಗಳಿರುವಾಗ ಗೋಲು ಗಳಿಸಲು ಅವಕಾಶ ಮಾಡಿಕೊಟ್ಟು ನಿರಾಸೆ ಅನುಭ ವಿಸಿತು. ಬ್ರೆಜಿಲ್ 1950 ಮತ್ತು 2018ರಲ್ಲಿ ಸ್ವಿಟ್ಜರ್ಲೆಂಡ್ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಡ್ರಾ ಮಾಡಿಕೊಂಡಿತ್ತು.

ಬ್ರೆಜಿಲ್ ಸ್ವಿಟ್ಜರ್ಲೆಂಡ್ ವಿರುದ್ಧ ಆಡಿರುವ ಒಂಬತ್ತು ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ನಾಲ್ಕು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.

ಮೊದಲಾರ್ಧದಲ್ಲಿ ಗೋಲು ಬಾರದ ಕಾರಣನ ಬದಲಿ ಆಟಗಾರನಾಗಿ ರೋಡ್ರಿಗೋ ಕ್ಯಾಸೆಮಿರೊ ಕಣಕ್ಕಿಳಿದರು. ಸಿಕ್ಕ ಅವಕಾಶ ವನ್ನು ಸರಿಯಾಗಿ ಬಳಿಸಿಕೊಂಡ ಕ್ಯಾಸೆಮಿರೊ, ತಂಡಕ್ಕೆ ಗೆಲುವಿನ ಗೋಲು ಗಳಿಸುವಲ್ಲಿ ಯಶಸ್ವಿಯಾದರು.

ಬ್ರೆಜಿಲ್ ಮುಂದಿನ ಪಂದ್ಯದಲ್ಲಿ ಸರ್ಬಿಯಾವನ್ನು ಎದುರಿಸಲಿದೆ. ಸ್ವಿಟ್ಜರ್ಲೆಂಡ್ ಮುಂದಿನ ಪಂದ್ಯದಲ್ಲಿ ಸರ್ಬಿಯಾ ವಿರುದ್ಧ ಸೆಣೆಸಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಜಿ ಗುಂಪಿನಿಂದ ಎರಡನೇ ತಂಡವಾಗಿ ನಾಕ್‌ಔಟ್ ಹಂತಕ್ಕೆ ಪ್ರವೇಶ ಪಡೆಯಲಿದೆ.