Wednesday, 11th December 2024

ಇನ್ನಿಂಗ್ಸ್ ಆರಂಭಿಸಿದ ಪೂಜಾರ-ಗಿ‌ಲ್‌, ಬೂಮ್ರಾ ನಾಯಕತ್ವ

ಎಜ್‌ಬಾಸ್ಟನ್: ಪ್ರವಾಸಿ ಭಾರತ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.

ಇತ್ತೀಚಿನ ವರದಿ ಪ್ರಕಾರ, ಭಾರತ ಎರಡು ವಿಕೆಟ್ ಕಳೆದುಕೊಂಡು ೫೩ ರನ್‌ ಗಳಿಸಿತ್ತು. ಆರಂಭಿಕರಿಬ್ಬರು ವೈಯಕ್ತಿಕ ೨೦ ರನ್‌ ನೊಳಗೆ ಆಟ ಮುಗಿಸಿದರು. ಅನುಭವಿ ವೇಗಿ ಆಂಡರ್ಸನ್‌ ಎರಡು ವಿಕೆಟ್‌ ಕಬಳಿಸಿದರು.

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಅನುಭವಿ ವೇಗಿ ಜಸ್‌ಪ್ರೀತ್ ಬೂಮ್ರಾ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ.

ಮಾಜಿ ನಾಯಕ ಕಪಿಲ್ ದೇವ್ ಬಳಿಕ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾದ ಮೊದಲ ವೇಗದ ಬೌಲರ್ ಬೂಮ್ರಾ ಎನಿಸಿದ್ದಾರೆ. ರೋಹಿತ್ ಅನುಪಸ್ಥಿತಿಯಲ್ಲಿ ಶುಭಮನ್ ಗಿಲ್ ಜೊತೆ ಚೇತೇಶ್ವರ ಪೂಜಾರ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಮಾಜಿ ನಾಯಕ ವಿರಾಟ್ ಕೊಹ್ಲಿ, ಹನುಮ ವಿಹಾರಿ, ಶ್ರೇಯಸ್ ಅಯ್ಯರ್ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲಿದ್ದಾರೆ.

ರವೀಂದ್ರ ಜಡೇಜ ಹಾಗೂ ಶಾರ್ದೂಲ್ ಠಾಕೂರ್ ಆಲ್‌ರೌಂಡರ್ ಸ್ಥಾನಗಳನ್ನು ನಿಭಾಯಿಸಲಿದ್ದಾರೆ. ಜಡೇಜ ತಂಡದಲ್ಲಿರುವ ಏಕಮಾತ್ರ ಸ್ಪಿನ್ನರ್ ಎನಿಸಿದ್ದಾರೆ. ತ್ರಿವಳಿ ವೇಗಿಗಳಾದ ನಾಯಕ ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ಹಾಗೂ ಮೊಹ ಮ್ಮದ್ ಸಿರಾಜ್ ಜೊತೆಗೆ ಶಾರ್ದೂಲ್ ನಾಲ್ಕನೇ ವೇಗಿಯ ಆಯ್ಕೆಯಾಗಿದ್ದಾರೆ.

ಕಳೆದ ವರ್ಷ ಅರ್ಧದಲ್ಲೇ ಮೊಟಕುಗೊಂಡಿರುವ ಸರಣಿಯಲ್ಲಿ ಟೀಮ್ ಇಂಡಿಯಾ 2-1ರ ಅಂತರದ ಮುನ್ನಡೆ ಕಾಯ್ದು ಕೊಂಡಿದೆ.