ಸಿಡ್ನಿ: ಟೀಂ ಇಂಡಿಯಾದೆದುರಿನ ಎರಡನೇ ಏಕದಿನ ಪಂದ್ಯದಲ್ಲೂ ಆತಿಥೇಯ ಆಸೀಸ್ ತಂಡ ಆರಂಭಿಕ ಶತಕದ ಜತೆಯಾಟ ನೀಡಿದ್ದು, ಹಿಡಿತ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗಿಗೆ ಇಳಿದಿರುವ ಆಸೀಸ್‌ಗೆ ಮಗದೊಮ್ಮೆ ಡೇವಿಡ್ ವಾರ್ನರ್ ಹಾಗೂ ನಾಯಕ ಆರನ್ ಫಿಂಚ್ ಶತಕದ ಜತೆಯಾಟ ನೀಡಿ, ಟೀಂ ಇಂಡಿಯಾ ಬೌಲಿಂಗಿನಲ್ಲಿ ಮೊನಚಿಲ್ಲದಿರುವುದನ್ನು ಸಾಬೀತುಪಡಿಸಿದರು.
ಇತ್ತೀಚಿನ ವರದಿ ಪ್ರಕಾರ, ಆಸ್ಟ್ರೇಲಿಯಾ ತಂಡ, 19 ಓವರ್ ನಡೆಯುತ್ತಿರುವಾಗಲೇ ವಿಕೆಟ್ ನಷ್ಟವಿಲ್ಲದೆ 114 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು. ಮೊದಲ ಪಂದ್ಯವನ್ನು ಆಸೀಸ್ ತಂಡ 66 ರನ್ನುಗಳಿಂದ ಗೆದ್ದಿತ್ತು. ಸ್ಟೀವನ್ ಸ್ಮಿತ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.