Sunday, 8th September 2024

ಬಿಗಿ ಬೌಲಿಂಗಿಗೆ ವಿಂಡೀಸ್‌ ಸುಸ್ತು: ಚಹಲ್‌ಗೆ ನಾಲ್ಕು ವಿಕೆಟ್‌

ಅಹಮದಾಬಾದ್: ರೋಹಿತ್‌ ಪಡೆಯ ಬಿಗಿ ಬೌಲಿಂಗಿಗೆ ತಕ್ಕ ಉತ್ತರ ನೀಡಲು ವಿಫಲವಾದ ವೆಸ್ಟ್‌ ಇಂಡೀಸ್‌ ತಂಡ ಭಾನುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ತನ್ನ ಬ್ಯಾಟಿಂಗ್‌ ಬಡತನವನ್ನು ಬಯಲು ಮಾಡಿದೆ.

ಕನ್ನಡಿಗ ಕೆ.ಎಲ್‌.ರಾಹುಲ್‌ ಮೊದಲ ಪಂದ್ಯದಿಂದ ಹೊರಗುಳಿದರು. ರೋಹಿತ್‌ ಶರ್ಮಾ ತಂಡವನ್ನು ಮುನ್ನಡೆಸಿದರು. ಟಾಸ್‌ ಗೆದ್ದು ಬೌಲಿಂಗ್‌ ಮಾಡಿದ ಭಾರತಕ್ಕೆ ಆರಂಭದಲ್ಲೇ ಯಶ ಸಿಕ್ಕಿತು. ವಿಂಡೀಸ್‌ ತಂಡ ನೂರು ರನ್‌ ದಾಖಲಿಸುವಷ್ಟರಲ್ಲಿ ಏಳು ಆಟಗಾರರನ್ನು ಕಳೆದುಕೊಂಡಿತು. ಈ ಪೈಕಿ, ನಾಯಕ ಕೀರನ್‌ ಪೊಲಾರ್ಡ್‌ ಮೊದಲ ಎಸೆತಕ್ಕೆ ಚಹಲ್‌ ಗೆ ವಿಕೆಟ್‌ ಒಪ್ಪಿಸಿದರು.

ಆಲ್ರೌಂಡರ್‌ ಜೇಸನ್‌ ಹೋಲ್ಡರ್‌ ಅವರ ಅರ್ಧಶತಕದ ನೆರವಿನಿಂದ ವಿಂಡೀಸ್‌ ಸಾಧಾರಣ ಮೊತ್ತ (176) ಪೇರಿಸುವಂತಾಯಿತು.

ಭಾರತದ ಪರ ಯಜುವೇಂದ್ರ ಚಹಲ್‌ ನಾಲ್ಕು ವಿಕೆಟ್‌ ಕಿತ್ತು, ಪ್ರವಾಸಿಗರಿಗೆ ಲಗಾಮು ಹಾಕಿದರು. ವಾಷಿಂಗ್ಟನ್‌ ಸುಂದರ್‌ ಮೂರು ಹಾಗೂ ಪ್ರಸಿದ್ದ ಕೃಷ್ಣ ಎರಡು ವಿಕೆಟ್‌ ಕಿತ್ತರು. ಬಳಿಕ ಫಾಬಿಯನ್‌ ಅಲೆನ್‌ ಅವರದ್ದೇ ಸರ್ವಾಧಿಕ ಮೊತ್ತ(೨೯).

ಇದು ಭಾರತ ಆಡುತ್ತಿರುವ 1,000ನೇ ಏಕದಿನ ಪಂದ್ಯವಾಗಿದ್ದು, ಭಾರತವು ಕ್ರಿಕೆಟ್ ಇತಿಹಾಸದಲ್ಲಿ1,000ನೇ ಪಂದ್ಯ ಆಡುತ್ತಿರುವ ಮೊದಲ ತಂಡವಾಗಿದೆ. ಟೀಂ ಇಂಡಿಯಾ ಪರ ದೀಪಕ್‌ ಹೂಡ, ಈ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಭಾರತದ ಐತಿಹಾಸಿಕ ಪಂದ್ಯದಲ್ಲಿ ದೀಪಕ್ ಹೂಡಾ ಚೊಚ್ಚಲ ಪಂದ್ಯ ಆಡಿದ ಭಾರತದ 243 ನೇ ಆಟಗಾರರಾದರು, ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಂದ ಭಾರತದ ಕ್ಯಾಪ್ ಸ್ವೀಕರಿಸಿದರು.

error: Content is protected !!