Friday, 22nd November 2024

Champions Trophy hockey : ಕೊರಿಯಾವನ್ನು4-1 ಗೋಲ್‌ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದ ಭಾರತ

Champions Trophy hockey

ಬೆಂಗಳೂರು: ದಕ್ಷಿಣ ಕೊರಿಯಾವನ್ನು 4-1 ಗೋಲುಗಳಿಂದ ಮಣಿಸಿದ ಭಾರತ ಹಾಕಿ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ (Champions Trophy hockey ) ಫೈನಲ್‌ಗೆ ಲಗ್ಗೆ ಇಟ್ಟಿದೆ. ಇಲ್ಲಿನ ಮೊಗಿ ಹಾಕಿ ಬೇಸ್‌ನಲ್ಲಿ ಸೋಮವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ನಾಯಕ ಹರ್ಮನ್ ಪ್ರೀತ್ ಸಿಂಗ್ ಅವರ ಅವಳಿ ಗೋಲ್‌ಗಳು ಮತ್ತು ಉತ್ತಮ್ ಸಿಂಗ್ ಮತ್ತು ಜೆರ್ಮನ್ ಪ್ರೀತ್ ಸಿಂಗ್ ಅವರ ತಲಾ ಒಂದು ಗೋಲುಗಳ ನೆರವಿನಿಂದ ಬಾರತ ಪ್ರಾಬಲ್ಯ ಮೆರೆಯಿತು. ಸೆಪ್ಟೆಂಬರ್ 17ರಂದು (ನಾಳೆ) ನಡೆಯಲಿರುವ ಫೈನಲ್ನಲ್ಲಿ ಭಾರತ ತಂಡ ಚೀನಾವನ್ನು ಎದುರಿಸಲಿದೆ.

ಉತ್ತಮ್ ಮತ್ತು ಜೆರ್ಮನ್ ಪ್ರೀತ್ ನೇರ ಗೋಲ್‌ಗಳನ್ನು ಹೊಡೆದರೆ ಹರ್ಮನ್ ಪ್ರೀತ್ ಪೆನಾಲ್ಟಿ ಕಾರ್ನರ್‌ಗಳ ಮೂಲಕ ಗೋಲ್‌ಗಳನ್ನು ಸಾಧಿಸಿದರು. ಪಂದ್ಯದಲ್ಲಿ ಭಾರತವು ಗೋಲ್ ಬಾರಿಸುವ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿತು. ಮೊದಲ ಕ್ವಾರ್ಟರ್ನಲ್ಲಿ ಉತ್ತಮ್ ಅವರು ದಕ್ಷಿಣ ಕೊರಿಯಾದ ಡಿಫೆನ್ಸ್ ಮೇಲೆ ಭಾರತ ತಂಡ ಒತ್ತಡ ಹೇರಿ ಪ್ರಾಬಲ್ಯ ಸಾಧಿಸಿತು. ಅದೇ ರೀತಿ ಯುವ ಗೋಲ್ ಕೀಪರ್ ಸೂರಜ್ ಕರ್ಕೇರಾ ಎರಡನೇ ಮತ್ತು ನಾಲ್ಕನೇ ಕ್ವಾರ್ಟರ್‌ಗಳಲ್ಲಿ ನಿರ್ಣಾಯಕ ಸೇವ್‌ಗಳನ್ನು ಮಾಡಿದರು.

ಇದನ್ನೂ ಓದಿ: Hilsa Fish: ಹಿಲ್ಸಾ ಮೀನಿನ ರಫ್ತು ನಿಷೇಧ; ಭಾರತದ ಕ್ಷಮೆಯಾಚಿಸಿದ ಬಾಂಗ್ಲಾದೇಶ

ಆರಂಭಿಕ ನಿಮಿಷಗಳಲ್ಲಿ ಕೊರಿಯಾದ ಗೋಲ್ ಕೀಪರ್ ಜೇಹಾನ್ ಕಿಮ್ ಅವರನ್ನು ವಂಚಿಸುವಲ್ಲಿ ಅಭಿಷೇಕ್ ಯಶಸ್ವಿಯಾದರು. ಕೊರಿಯಾದ ಡಿಫೆನ್ಸ್ ವಿಭಾಗವು ಹೆಚ್ಚು ಸಾಮರ್ಥ್ಯ ತೋರಲಿಲ್ಲ. ಹೀಗಾಗಿ ಭಾರತ ಮೊದಲ ಕ್ವಾರ್ಟರ್‌ನಲ್ಲಿ 1-0 ಮುನ್ನಡೆ ಕಂಡುಕೊಂಡರು. ನಂತರವೂ ಅದೇ ಪ್ರಾಬಲ್ಯ ಮುಂದುವರಿಯಿತು. ಕೊನೆಯ ತನಕವೂ 4-0 ಮುನ್ನಡೆಯೊಂದಿಗೆ ಸಾಗಿತು. ಆದರೆ, ಆಟ ಮುಕ್ತಾಯಕ್ಕೆ 8 ನಿಮಿಷಗಳು ಬಾಕಿ ಇರುವಾಗ ಕೊರಿಯಾ ಪೆನಾಲ್ಟಿ ಕಾರ್ನರ್ ಗಳಿಸಿತು. ಹೈಯಾನ್ಹಾಂಗ್ ಕಿಮ್ ಅವರ ಪ್ರಯತ್ನವು ಸಾಫಲ್ಯ ಕಂಡಿತು. ಆದಾಗ್ಯೂ ಮುನ್ನಡೆ ಹೊಂದಿದ್ದ ಭಾರತ 4-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿ ಫೈನಲ್ ಪ್ರವೇಶಿಸಿದೆ.

ಇದಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡ ಚೀನಾ ವಿರುದ್ಧ ಸೋಲು ಅನುಭವಿಸಿತ್ತು. ದಿನದ ಮೊದಲ ಸೆಮಿಫೈನಲ್ ಪಂದ್ಯವು ನಿಜವಾಗಿಯೂ ತನ್ನ ಚೀನಾ ಆರಂಭದಿಂದಲೇ ಫೈನಲ್ ಪ್ರವೇಶಿಸುವ ಉದ್ದೇಶದಿಂದ ಪಾಕಿಸ್ತಾನಕ್ಕೆ ಸೆಡ್ಡು ಹೊಡೆಯಿತು. ಹೀಗಾಗಿ ಪಾಕಿಸ್ತಾನಕ್ಕೆ ಮತ್ತೊಂದು ಬಾರಿ ಮುಖಭಂಗವಾಯಿತು. ಪಾಕಿಸ್ತಾನ ತನ್ನ ಲೀಗ್ ಹಂತದ ಕೊನೇ ಪಂದ್ಯದಲ್ಲಿ ಭಾರತದ ವಿರುದ್ಧವೂ ಸೋಲು ಕಂಡಿತ್ತು.