ಬ್ರೆಜಿಲ್ : ಬ್ರೆಜಿಲ್ ನ ಫುಟ್ಬಾಲ್ ತಾರೆ ರೊನಾಲ್ಡಿನೊಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಬೆಲೊ ಹಾರಿಜಾಂಟೆ ಯಲ್ಲಿ ಸ್ವಯಂ ಕ್ವಾರಂಟೈನ್ ಆಗಿದ್ದಾರೆ.
ತಮ್ಮ ಅಧಿಕೃತ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಸ್ಪಷ್ಟಪಡಿಸಿರುವ ರೊನಾಲ್ಡಿನೊ, ಶನಿವಾರ ಬ್ರೆಜಿಲ್ ನಗರಕ್ಕೆ ಬಂದಿದ್ದು, ಈ ವೇಳೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷಾ ವರದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಹೇಳಿ ದ್ದಾರೆ.