ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಭಾನುವಾರ ನಡೆಯುವ ಜಿದ್ದಾಜಿದ್ದಿನ ಫೈನಲ್ ನಲ್ಲಿ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗುತ್ತಿವೆ.
ವಿಶ್ವಕಪ್ ಟ್ರೋಫಿ ಯಾವ ತಂಡಕ್ಕೆ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.
ಟಿ20 ವಿಶ್ವಕಪ್ ಇತಿಹಾಸದಲ್ಲಿಯೇ ನ್ಯೂಜಿಲೆಂಡ್ ಮೊದಲ ಸಲ ಮತ್ತು ಆಸ್ಟ್ರೇಲಿಯಾ ಎರಡನೇ ಸಲ ಫೈನಲ್ ಹಂತಕ್ಕೆ ತಲುಪಿವೆ. ಇತ್ತಂಡಗಳು ವಿಶ್ವಕಪ್ ಗೆದ್ದು ಇತಿಹಾಸ ರಚಿಸುವ ತವಕದಲ್ಲಿವೆ.
ಸೆಮಿ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಒಂದು ಓವರ್ ಬಾಕಿ ಇರುವಾಗಲೇ ಬಗ್ಗುಬಡಿದ ಆಸ್ಟ್ರೇಲಿಯಾ, ಫೈನಲಿನಲ್ಲಿ ಕಿವೀಸ್ ತಂಡವನ್ನು ಸೋಲಿಸಿ, ಮೊದಲ ಬಾರಿ ಚಾಂಪಿಯನ್ ಆಗುವ ಯೋಚನೆಯಲ್ಲಿದೆ.