Friday, 13th December 2024

Cricket Australia : ಆಟಗಾರ್ತಿ ಜತೆ ಸಂಬಂಧ; ಮಹಿಳಾ ತಂಡದ ಕೋಚ್‌ಗೆ 20 ವರ್ಷ ನಿಷೇಧ

Cricket Australia

ನವದೆಹಲಿ: ನೀತಿ ಸಂಹಿತೆಯ ಗಂಭೀರ ಉಲ್ಲಂಘನೆ ಮಾಡಿರುವ ಶ್ರೀಲಂಕಾದ ಮಾಜಿ ಕ್ರಿಕೆಟಿಗ ದುಲಿಪ್ ಸಮರವೀರ ಅವರಿಗೆ ಕ್ರಿಕೆಟ್ ಆಸ್ಟ್ರೇಲಿಯಾ (Cricket Australia) ಗುರುವಾರ 20 ವರ್ಷಗಳ ನಿಷೇಧ ಹೇರಿದೆ. ದುಲಿಪ್ ಸಮರವೀರ ಅವರನ್ನು ಮುಂದಿನ ಎರಡು ದಶಕಗಳ ಕಾಲ ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಯಾವುದೇ ಹುದ್ದೆಯನ್ನುವಹಿಸದಂತೆ ನಿಷೇಧಿಸಲಾಗಿದೆ. ಅವರು 20 ವರ್ಷಗಳವರೆಗೆ ಆಸ್ಟ್ರೇಲಿಯಾದ ರಾಷ್ಟ್ರೀಯ ತಂಡ ಅಥವಾ ರಾಜ್ಯ ಅಥವಾ ಟೆರಿಟರಿ ಅಸೋಸಿಯೇಷನ್‌ನಲ್ಲಿ ಯಾವುದೇ ಸ್ಥಾನ ಹೊಂದಲು ಸಾಧ್ಯವಾಗುವುದಿಲ್ಲ.

ದುಲೀಪ್ ಅವರು ಆಟಗಾರ್ತಿಯೊಬ್ಬಳ ಜತೆ ಬಲವಂತದ ಸಂಬಂಧ ಹೊಂದಿದ್ದರು ಎಂಬುದಾಗಿ ತನಿಖೆಯಲ್ಲಿ ಬಯಲಾಗಿದೆ. ಇದು ಆಟಗಾರ್ತಿಯರ ಸುರಕ್ಷತೆಗಾಗಿ ರೂಪಿಸಲಾಗಿರುವ ನಿಯಮದ ವಿರುದ್ಧವಾಗಿದೆ. ಹೀಗಾಗಿ ಅವರನ್ನು ಹುದ್ದೆಯಿಂದ ಕೆಳಕ್ಕೆ ಇಳಸಿ

ವಿಕ್ಟೋರಿಯಾ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ದುಲಿಪ್ ಸಮರವೀರ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾಗ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ನಿಷೇಧಿಸುವ ನಿರ್ಧಾರವನ್ನು ಕ್ರಿಕೆಟ್ ಆಸ್ಟ್ರೇಲಿಯಾ ತೆಗೆದುಕೊಂಡಿದೆ. ಮಾಜಿ ಕ್ರಿಕೆಟಿಗನ ನಡವಳಿಕೆಯನ್ನು “ಖಂಡನೀಯ” ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಬಣ್ಣಿಸಿದೆ. ತನಿಖೆಯಲ್ಲಿ ದುಲಿಪ್ ಸಮರವೀರ ಸಿಎ ನೀತಿ ಸಂಹಿತೆಯ ಕಲಂ 2.23 ಅನ್ನು ಉಲ್ಲಂಘಿಸಿದ್ದಾರೆ ಎಂದು ಕಂಡುಬಂದಿದೆ.

ಸಮರವೀರಗೆ ನಿಷೇಧ

ಕ್ರಿಕೆಟ್ ವಿಕ್ಟೋರಿಯಾ ಸಿಇಒ ನಿಕ್ ಕಮಿನ್ಸ್ ಅವರು ದುಲಿಪ್ ಸಮರವೀರ ಅವರನ್ನು 20 ವರ್ಷಗಳ ಕಾಲ ನಿಷೇಧಿಸುವ ತೀರ್ಪನ್ನು ಬೆಂಬಲಿಸಿದ್ದಾರೆ. ಮಾಜಿ ಕ್ರಿಕೆಟಿಗನ ನಡವಳಿಕೆಯು ”ದ್ರೋಹ’ ಎಂದು ಹೇಳಿದ್ದಾರೆ. “ದುಲಿಪ್ ಸಮರವೀರ ಅವರನ್ನು 20 ವರ್ಷಗಳ ಕಾಲ ನಿಷೇಧಿಸುವ ನೀತಿ ಸಂಹಿತೆ ಆಯೋಗ ತೆಗೆದುಕೊಂಡ ನಿರ್ಧಾರವನ್ನು ನಾವು ಬಲವಾಗಿ ಬೆಂಬಲಿಸುತ್ತೇವೆ” ಎಂದು ಕಮಿನ್ಸ್ ಹೇಳಿದರು.

ಇದನ್ನೂ ಓದಿ: Emergency Movie: ಕಂಗನಾ ಸಿನಿಮಾ ʻಎಮರ್ಜೆನ್ಸಿʼ ರಿಲೀಸ್‌ ಬಗ್ಗೆ ಒಂದು ವಾರದೊಳಗೆ ಸೆನ್ಸಾರ್‌ ಮಂಡಳಿ ನಿರ್ಧಾರ

“ಈ ಪ್ರಕರಣದ ಸಂತ್ರಸ್ತೆಗೆ ಎಲ್ಲ ರೀತಿಯ ಬೆಂಬಲ ನೀಡಲಾಗುತ್ತದೆ. ಮೈದಾನದ ಒಳಗೆ ಮತ್ತು ಹೊರಗೆ ತನ್ನ ಗುರಿಗಳನ್ನು ಸಾಧಿಸಲು ಅವರಿಗೆ ಅನುವು ಮಾಡಿಕೊಡಲಾಗುವುದು ಎಂದು ಅವರು ಹೇಳಿದ್ದಾರೆ.

“ಕ್ರಿಕೆಟ್ ವಿಕ್ಟೋರಿಯಾದಲ್ಲಿ ಪ್ರತಿಯೊಬ್ಬರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡಲಾಗಿದೆ. ಸ್ಥಾನ ಅಥವಾ ನಿಯಮದೊಂದಿಗೆ ರಾಜಿ ಮಾಡಿಕೊಳ್ಳುವ ಯಾವುದೇ ನಡವಳಿಕೆಯನ್ನು ನಾವು ಸಹಿಸುವುದಿಲ್ಲ”ಎಂದು ಕಮಿನ್ಸ್ ಹೇಳಿದ್ದಾರೆ.

ದುಲಿಪ್ ಸಮರವೀರ 1990 ರ ದಶಕದಲ್ಲಿ ಶ್ರೀಲಂಕಾವನ್ನು ಏಳು ಟೆಸ್ಟ್ ಮತ್ತು ಐದು ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು. ಅವರ ಕ್ರಿಕೆಟ್ ವೃತ್ತಿಜೀವನ ಮುಗಿದ ನಂತರ, ಅವರು ತರಬೇತುದಾರರಾಗಿ ತಮ್ಮ ವೃತ್ತಿಮುಂದುವರಿಸಿದ್ದರು. . 2008ರಲ್ಲಿ, ಅವರು ಕ್ರಿಕೆಟ್ ವಿಕ್ಟೋರಿಯಾದ ಮಹಿಳಾ ತಂಡಕ್ಕೆ ವಿಶೇಷ ಬ್ಯಾಟಿಂಗ್ ಕೋಚ್ ಆಗಿ ಸೇರಿದ್ದರು.

ನವೆಂಬರ್ 2023 ರಲ್ಲಿ, ಅವರನ್ನು ತಂಡದ ಮಧ್ಯಂತರ ಮುಖ್ಯ ತರಬೇತುದಾರರಾಗಿ ಹೆಸರಿಸಲಾಯಿತು. ನಂತರ, ಅವರನ್ನು ಪೂರ್ಣ ಸಮಯದ ತರಬೇತುದಾರರಾಗಿಯೂ ನೇಮಿಸಲಾಗಿತ್ತು.