ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ (ಅಕ್ಟೋಬರ್ 14) ಭಾರತ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡ ಮತ್ತು ನ್ಯೂಜಿಲೆಂಡ್ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡದ ನಡುವಿನ ಏಕದಿನ ಸರಣಿಯ ವೇಳಾಪಟ್ಟಿ ಪ್ರಕಟಿಸಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಅಕ್ಟೋಬರ್ 24 ರಂದು ನಡೆಯಲಿದೆ. ಸರಣಿಯ ಎರಡನೇ ಪಂದ್ಯ ಅಕ್ಟೋಬರ್ 27ರಂದು ನಡೆಯಲಿದೆ. ತಂಡಗಳ ನಡುವಿನ ಸರಣಿಯ ಕೊನೆಯ ಪಂದ್ಯ ಮಂಗಳವಾರ (ಅಕ್ಟೋಬರ್ 29) ನಡೆಯಲಿದೆ.
🚨 NEWS 🚨
— BCCI Women (@BCCIWomen) October 14, 2024
Fixtures for Team India (Senior Women)’s ODI series against New Zealand announced.
Details 🔽 #TeamIndia | #INDvNZ | @IDFCFIRSTBankhttps://t.co/6FMzy6nuBk
ಭಾರತ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡ ಮತ್ತು ನ್ಯೂಜಿಲೆಂಡ್ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡದ ನಡುವಿನ ಸರಣಿಯ ಎಲ್ಲಾ ಮೂರು ಪಂದ್ಯಗಳು ಅಹಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಎಲ್ಲಾ ಮೂರು ಪಂದ್ಯಗಳು ಐಸಿಸಿ ಮಹಿಳಾ ಚಾಂಪಿಯನ್‌ಶಿಪ್ಭಾ ಭಾಗವಾಗಲಿವೆ.
ಇದನ್ನೂ ಓದಿ: Rishabh Pant : ನ್ಯೂಜಿಲ್ಯಾಂಡ್ ಸರಣಿಗೆ ಮೊದಲು ಗಲ್ಲಿ ಕ್ರಿಕೆಟ್ ಆಡಿದ ರಿಷಭ್ ಪಂತ್
ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ ಆಡಳಿತ ಮಂಡಳಿ “ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಮೂರು ಪಂದ್ಯಗಳ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಏಕದಿನ ಸರಣಿಯ ಪಂದ್ಯಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸೋಮವಾರ ಪ್ರಕಟಿಸಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಸರಣಿಯು ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ನ ಭಾಗವಾಗಿದೆ.
ಭಾರತ-ನ್ಯೂಜಿಲೆಂಡ್ ಏಕದಿನಸ ಸರಣಿಯ ವೇಳಾಪಟ್ಟಿ
- ಅಕ್ಟೋಬರ್ 24, ಗುರುವಾರ ಮಧ್ಯಾಹ್ನ 1.30ಕ್ಕೆ, ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್
- ಅಕ್ಟೋಬರ್ 27, ಭಾನುವಾರ ಮಧ್ಯಾಹ್ನ1.30ಕ್ಕೆ,ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್
- ಅಕ್ಟೋಬರ್ 29, ಮಂಗಳವಾರ, ಮಧ್ಯಾಹ್ನ 1.30ಕ್ಕೆ, ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್