Thursday, 19th September 2024

Cricket News : ಕ್ರಿಕೆಟ್‌ನಲ್ಲಿ ಈ ರೀತಿಯ ನೋಬಾಲ್‌ ರೂಲ್ ಇದೆಯಾ? ಇಲ್ಲಿದೆ ವಿಡಿಯೊ

Cricket News

ಬೆಂಗಳೂರು: ಸೆಪ್ಟೆಂಬರ್ 5 ರಂದು ಸೋಮರ್ಸೆಟ್ ಮತ್ತು ನಾರ್ಥಾಂಪ್ಟನ್‌ಶೈರ್‌ ನಡುವಿನ ಟಿ 20 ಬ್ಲಾಸ್ಟ್ ಕ್ವಾರ್ಟರ್ ಫೈನಲ್ ಪಂದ್ಯದ ಸಮಯದಲ್ಲಿ (Cricket News) ಅಪರೂಪದ ಪ್ರಸಂಗವೊಂದು ನಡೆದಿದೆ. ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಈ ಘಟನೆ ನಡೆದಿದೆ. ಸೋಮರ್ಸೆಟ್ ಬ್ಯಾಟ್ಸ್ಮನ್ ಲೂಯಿಸ್ ಗ್ರೆಗೊರಿ ಅವರಿಗೆ ಎಡಗೈ ಸಾಂಪ್ರದಾಯಿಕ ಸ್ಪಿನ್ನರ್ ಸೈಫ್ ಜೈಬ್ ಆಫ್ ಸ್ಟಂಪ್‌ನ ಹೊರಗೆ ಚೆಂಡು ಎಸೆದಿದ್ದರು. ವಿಕೆಟ್ ಕೀಪರ್ ಲೂಯಿಸ್ ಮೆಕ್ಮಾನಸ್ ತಕ್ಷಣವೇ ಸ್ಪಂಪ್‌ ಔಟ್‌f ಮಾಡಿದರು. ಅಂಪೈರ್‌ ಮೂರನೇ ಅಂಪೈರ್‌ ನೆರವು ಪಡೆದರು. ಆದರೆ ಮೂರನೇ ಅಂಪೈರ್‌ ನೋಬಾಲ್ ಕೊಟ್ಟರು. ಈ ವೇಳೆ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿ ಮೂಡಿಸಿತು.

ಕ್ರಿಕೆಟ್‌ನ ನಿಯಮಗಳನ್ನು ರೂಪಿಸುವ ಮೆರಿಲ್ಬೋನ್ ಕ್ರಿಕೆಟ್ ಕ್ಲಬ್‌ನ ಆರ್ಟಿಕಲ್ ಸಂಖ್ಯೆ 27.3.1 ರ ಪ್ರಕಾರ, ಚೆಂಡು ಎಸೆದು ಬ್ಯಾಟರ್‌ ತನ್ನ ಪ್ರಯತ್ನ ಮುಗಿಸುವ ತನಕ ವಿಕೆಟ್ ಕೀಪರ್‌ ವಿಕೆಟ್‌ನ ಹಿಂದೆಯೇ ಇರಬೇಕು. ಒಂದು ವೇಳೆ ವಿಕೆಟ್‌ಗಿಂತ ಮುಂದೆ ಹಿಡಿದರೆ ಅದು ನೋ ಬಾಲ್‌ ಅಂತೆಯೇ ವಿಕೆಟ್‌ ಕೀಪರ್‌ ಲೂಯಿಸ್‌ ಮೆಕ್ಮಾನಸ್‌ ವಿಕೆಟ್‌ಗಿಂತ ಮುಂದೆ ಬಂದು ಚೆಂಡು ಹಿಡಿದಿದ್ದರು. ಹೀಗಾಗಿ ಮೂರನೇ ಅಂಪೈರ್ ಅದನ್ನು ನೋಬಾಲ್‌ ಎಂದು ಹೇಳಿದ್ದರು.

ಟಿ 20 ಐ ನಾಯಕನಾಗಿ ತಮ್ಮ ಮೊದಲ ಋತುವಿನಲ್ಲಿ ಸಸೆಕ್ಸ್ ತಂಡವನ್ನು ಬ್ಲಾಸ್ಟ್ ಟೂರ್ನಿಯ ಫೈನಲ್‌ ಕಡೆಗೆ ಮುನ್ನಡೆಸಿದ್ದರು ಟೈಮೆಲ್‌ ಮಿಲ್ಸ್. ಆದಾಗ್ಯೂ ಅವರು ತಮ್ಮ ತಂಡಕ್ಕೆ ಜೋಫ್ರಾ ಆರ್ಚರ್ ಲಭ್ಯವಾಗದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಬ್ಲಾಸ್ಟ್ ಫೈನಲ್ಸ್ ದಿನದಂದು ಸೆಪ್ಟೆಂಬರ್ 14 ರಂದು ಎಡ್ಜ್ ಬಾಸ್ಟನ್ ನಲ್ಲಿ ಎರಡು ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ. ಆ ಅವಧಿಯಲ್ಲಿ, ಇಂಗ್ಲೆಂಡ್ ತನ್ನ ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ತವರು ಟಿ 20 ಐ ಸರಣಿಯಲ್ಲಿ ಭಾಗಿಯಾಗಲಿದೆ.

ಎರಡನೇ ಮತ್ತು ಮೂರನೇ ಟಿ 20 ಪಂದ್ಯಗಳು ಸೆಪ್ಟೆಂಬರ್ 13 ಮತ್ತು 15 ರಂದು ನಡೆಯಲಿದ್ದು, ಇದರ ಪರಿಣಾಮವಾಗಿ, ಕೆಲವು ಇಂಗ್ಲೆಂಡ್ ಆಟಗಾರರು ಬ್ಲಾಸ್ಟ್ ಫೈನಲ್ಸ್ ದಿನವನ್ನು ಕಳೆದುಕೊಳ್ಳಲಿದ್ದಾರೆ. ಅಂತಿಮ ಎರಡು ಪಂದ್ಯಗಳಿಗೆ ಆಟಗಾರರ ಅಗತ್ಯವಿಲ್ಲದಿದ್ದರೆ ಮಾತ್ರ ಅವರನ್ನು ಬಿಡುಗಡೆ ಮಾಡಲಾಗುತ್ತದೆ.

ಫೈನಲ್ ಪಂದ್ಯಕ್ಕೂ ಮುನ್ನ ತಮ್ಮ ಪ್ರಮುಖ ವೇಗಿಗಳಲ್ಲಿ ಒಬ್ಬರಾದ ಆರ್ಚರ್ ಅವರನ್ನು ಕಳೆದುಕೊಂಡ ಬಗ್ಗೆ ಮಿಲ್ಸ್ ಹತಾಶೆ ವ್ಯಕ್ತಪಡಿಸಿದ್ದಾರೆ. ಇದು “ತುಂಬಾ ಮೂರ್ಖತನ” ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Vinesh Phogat : ವಿನೇಶ್‌ ಮಾಡಿದ್ದು ದೇಶದ್ರೋಹದ ಕೆಲಸ, ಒಲಿಂಪಿಕ್ಸ್‌ನಲ್ಲಿ 6 ಪದಕಗಳು ಸಿಗದಂತೆ ಮಾಡಿದರು; ಸಂಜಯ್ ಸಿಂಗ್

“ನನಗೆ ತಿಳಿದ ಮಟ್ಟಿಗೆ ಯಾವುದೇ ಇಂಗ್ಲೆಂಡ್ ಆಟಗಾರರು ಲಭ್ಯವಿರುವುದಿಲ್ಲ. ಇದು ತುಂಬಾ ಮೂರ್ಖತನ, ಪ್ರಾಮಾಣಿಕವಾಗಿ ಹೇಳಬೇಕೆಂದರೆ. ಜೋಫ್ (ಆರ್ಚರ್) ಅವರಂತಹ ಆಟಗಾರನನ್ನು ಕಳೆದುಕೊಳ್ಳುವುದು ನಮಗೆ ನಿಜವಾಗಿಯೂ ಬೇಸರದ ಸಂಗತಿ. ಅವರ ಸ್ಥಾನಕ್ಕೆ ಯಾರು ಬರುತ್ತಾರೋ ಎಂಬುದೇ ಅಚ್ಚರಿ ಎಂದು ಲಂಕಾಷೈರ್ ವಿರುದ್ಧ ಎಂಟು ವಿಕೆಟ್ಗಳಿಂದ ಗೆದ್ದ ನಂತರ ಮಿಲ್ಸ್ ಹೇಳಿದ್ದಾರೆ.

ಗುಸ್ ಅಟ್ಕಿನ್ಸನ್, ಡಾನ್ ಲಾರೆನ್ಸ್, ಒಲ್ಲಿ ಪೋಪ್ ಮತ್ತು ಜೇಮಿ ಸ್ಮಿತ್ ಸೇರಿದಂತೆ ಸರ್ರೆ ತನ್ನ ನಾಲ್ಕು ಟೆಸ್ಟ್ ಆಟಗಾರರ ಲಭ್ಯತೆಯ ದೃಢೀಕರಣಕ್ಕಾಗಿ ಕಾಯುತ್ತಿದೆ. ಇಂಗ್ಲೆಂಡ್‌ ಟಿ 20 ಐ ತಂಡದಲ್ಲಿ ಅನ್ಕ್ಯಾಪ್ಡ್ ಆಲ್ರೌಂಡರ್‌ಗಳಾದ ಡಾನ್ ಮೌಸ್ಲೆ ಮತ್ತು ಜಾಕೋಬ್ ಬೆತೆಲ್ ಸೇರಿಕೊಂಡಿದ್ದಾರೆ.

Leave a Reply

Your email address will not be published. Required fields are marked *