Virat Kohli Test Retirement: ಟೆಸ್ಟ್ ಕ್ರಿಕೆಟ್‌ಗೆ ಭಾವನಾತ್ಮಕ ವಿದಾಯ ಹೇಳಿದ ಕಿಂಗ್ ಕೊಹ್ಲಿ!
Virat Kohli's Test Retirement: ಆಧುನಿಕ ಕ್ರಿಕೆಟ್ ದಿಗ್ಗಜ ಹಾಗೂ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮೇ 12ರಂದ ಸೋಮವಾರ ತಮ್ಮ 14 ವರ್ಷಗಳ ಟೆಸ್ಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ತಮ್ಮ ಹಠಾತ್ ವಿದಾಯ ಮೂಲಕ ಕಿಂಗ್ ಕೊಹ್ಲಿ ವಿಶ್ವ ಕ್ರಿಕೆಟ್‌ಗೆ ಅಚ್ಚರಿ ಮೂಡಿಸಿದ್ದಾರೆ.


ನವದೆಹಲಿ: ಆಧುನಿಕ ಕ್ರಿಕೆಟ್ ದಿಗ್ಗಜ ಹಾಗೂ ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ (Virat Kohli) ತಮ್ಮ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಇದರೊಂದಿಗೆ ಭಾರತ ತಂಡದೊಂದಿಗಿನ (Indian Test Team) ತಮ್ಮ 14 ವರ್ಷಗಳ ಟೆಸ್ಟ್ ವೃತ್ತಿ ಜೀವನದ ಪಯಣಕ್ಕೆ ಮೇ 12 ರಂದು ಸೋಮವಾರ ಅಧಿಕೃತವಾಗಿ ಪೂರ್ಣ ವಿರಾಮವನ್ನು ಇಟ್ಟಿದ್ದಾರೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿರಾಟ್ ಕೊಹ್ಲಿ ಭಾವನಾತ್ಮಕ ಪೋಸ್ಟ್ ಹಾಕುವ ಮೂಲಕ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಕೊಹ್ಲಿಯ ಈ ನಿರ್ಧಾರದಿಂದ ವಿಶ್ವ ಕ್ರಿಕೆಟ್‌ಗೆ ಅಚ್ಚರಿಯಾಗಿದೆ.
ಇತ್ತೀಚೆಗೆ ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಟೆಸ್ಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು. ಇದರ ಬೆನ್ನಲ್ಲೆ ವಿರಾಟ್ ಕೊಹ್ಲಿ ಕೂಡ ಟೆಸ್ಟ್ ವೃತ್ತಿ ಜೀವನಕ್ಕೆ ವಿದಾಯ ಹೇಳುವುದಾಗಿ ಬಿಸಿಸಿಐಗೆ ತಿಳಿಸಿದ್ದರು. ಆದರೆ, ಈ ಬಗ್ಗೆ ಇನ್ನಷ್ಟು ಸಮಯ ತೆಗೆದುಕೊಂಡು ಅಂತಿಮ ಕರೆಯನ್ನು ತೆಗೆದುಕೊಳ್ಳಿ ಎಂದು ಕೊಹ್ಲಿಗೆ ಬಿಸಿಸಿಐ ಮನವಿ ಮಾಡಿತ್ತು ಎಂದು ವರದಿಯಾಗಿತ್ತು. ಏಕೆಂದರೆ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಆಡಬೇಕೆಂದು ಬಿಸಿಸಿಐನ ಉದ್ದೇಶವಾಗಿತ್ತು. ಆದರೆ, ವಿರಾಟ್ ಕೊಹ್ಲಿ ಸೋಮವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮ ಟೆಸ್ಟ್ ವಿದಾಯದ ಪರವಾಗಿ ಗಟ್ಟಿಯಾಗಿ ನಿಂತರು.
IND vs ENG: ʻದಯವಿಟ್ಟು ವಿದಾಯ ಹೇಳಬೇಡಿʼ-ವಿರಾಟ್ ಕೊಹ್ಲಿಗೆ ಅಂಬಾಟಿ ರಾಯುಡು ಮನವಿ!
ವಿರಾಟ್ ಕೊಹ್ಲಿಯ ಭಾವನಾತ್ಮಕ ಪೋಸ್ಟ್
"ಟೆಸ್ಟ್ ಕ್ರಿಕೆಟ್‌ನಲ್ಲಿ ನಾನು ಮೊದಲ ಬಾರಿ ಬ್ಯಾಗಿ ಬ್ಲೂ ಧರಿಸಿ ಇಂದಿಗೆ 14 ವರ್ಷಗಳು ಕಳೆದಿವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಸ್ವರೂಪದಲ್ಲಿ ನನ್ನ ಪಯಣ ಇಲ್ಲಿಯವರೆಗೂ ಬಂದು ನಿಲ್ಲುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಟೆಸ್ಟ್ ಕ್ರಿಕೆಟ್ ನನ್ನನ್ನು ಪರೀಕ್ಷಿಸಿತು, ನನ್ನನ್ನು ರೂಪಿಸಿತು ಮತ್ತು ಇಲ್ಲಿ ಕಲಿತಿರುವ ಪಾಠಗಳನ್ನು ನಾನು ಜೀವನಪರ್ಯಂತ ತೆಗೆದುಕೊಂಡು ಹೋಗುತ್ತೇನೆ," ಎಂದು ವಿರಾಟ್ ಕೊಹ್ಲಿ ಬರೆದಿದ್ದಾರೆ.
"ಬಿಳಿ ಜೆರ್ಸಿಯಲ್ಲಿ ಆಡುವುದರಲ್ಲಿ ಆಳವಾದ ವೈಯಕ್ತಿಕತೆಯಿದೆ. ಶಾಂತವಾದ ಜಂಜಾಟ, ದೀರ್ಘವಾದ ದಿನಗಳು, ಯಾರೂ ನೋಡದ ಸಣ್ಣ ಕ್ಷಣಗಳು ನನ್ನಲ್ಲಿ ಶಾಶ್ವತವಾಗಿ ಉಳಿಯಲಿದೆ."
"ಟೆಸ್ಟ್ ಕ್ರಿಕೆಟ್‌ನಿಂದ ಹೊರಗೆ ಬರುವುದು ಸುಲಭವಾದ ನಿರ್ಧಾರವಲ್ಲ, ಆದರೆ ಪ್ರಸ್ತುತ ಇದು ಸರಿಯಾಗಿದೆ ಎಂಬ ಭಾವನೆ ನನ್ನಲ್ಲಿ ಉಂಟಾಗುತ್ತಿದೆ. ಟೆಸ್ಟ್ ಕ್ರಿಕೆಟ್‌ಗೆ ನನ್ನಿಂದ ಸಾಧ್ಯವಾದಷ್ಟನ್ನು ನೀಡಿದ್ದೇನೆ ಹಾಗೂ ಅದು ಕೂಡ ನಾನು ನಿರೀಕ್ಷೆ ಮಾಡದಷ್ಟು ಕೊಡುಗೆಯನ್ನು ನನಗೆ ಹಿಂತಿರುಗಿಸಿದೆ," ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
𝗧𝗵𝗮𝗻𝗸 𝘆𝗼𝘂, 𝗩𝗶𝗿𝗮𝘁 𝗞𝗼𝗵𝗹𝗶! 🙌
— BCCI (@BCCI) May 12, 2025
An era ends in Test cricket but the legacy will continue FOREVER! 🫡🫡@imVkohli, the former Team India Captain retires from Test cricket.
His contributions to #TeamIndia will forever be cherished! 👏 👏 pic.twitter.com/MSe5KUtjep
"ಪಂದ್ಯದಲ್ಲಿ ನನ್ನ ಜೊತೆ ಮೈದಾನ ಹಂಚಿಕೊಂಡ ಹಾಗೂ ನನ್ನ ಪಯಣದುದ್ದಕ್ಕೂ ನನಗೆ ಪ್ರೋತ್ಸಾಹ ಹಾಗೂ ಬೆಂಬಲ ನೀಡಿದ ಪ್ರತಿಯೊಬ್ಬ ವ್ಯಕ್ತಿಗೂ ನಾನು ತುಂಬು ಹೃದಯದಿಂದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನನ್ನ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನವನ್ನು ನಾನು ಯಾವಾಗಲೂ ನಗುವಿನೊಂದಿಗೆ ಹಿಂತಿರುಗಿ ನೋಡುತ್ತೇನೆ," ಎಂದು ಕಿಂಗ್ ಕೊಹ್ಲಿ ಭಾವುಕರಾಗಿದ್ದಾರೆ.
Virat Kohli: ಭಾವುಕ ಪೋಸ್ಟ್ ಶೇರ್ ಮಾಡಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿಯ ಟೆಸ್ಟ್ ವೃತ್ತಿ ಜೀವನದ ಅಂಕಿಅಂಶಗಳು
ವಿರಾಟ್ ಕೊಹ್ಲಿ 2011 ಜೂನ್ 20 ರಂದು ವೆಸ್ಟ್ ಇಂಡೀಸ್ ವಿರುದ್ಧ ಕಿಂಗ್ಸ್‌ಸ್ಟನ್ ಪಂದ್ಯವನ್ನು ಆಡುವ ಮೂಲಕ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನವನ್ನು ಆರಂಭಿಸಿದ್ದರು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಎಂಎಸ್ ಧೋನಿ ಸೇರಿದಂತೆ ಟೆಸ್ಟ್ ಕ್ರಿಕೆಟ್‌ನ ದಿಗ್ಗಜರ ಜೊತೆ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿದ್ದಾರೆ. ಇಲ್ಲಿಯ ತನಕ ವಿರಾಟ್ ಕೊಹ್ಲಿ ಆಡಿದ 123 ಟೆಸ್ಟ್ ಪಂದ್ಯಗಳಿಂದ 46.85ರ ಸರಾಸರಿಯಲ್ಲಿ 9,230 ರನ್‌ಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ಅವರು 30 ಶತಕಗಳು ಹಾಗೂ 31 ಅರ್ಧಶತಕಗಳನ್ನು ಬಾರಿಸಿದ್ದಾರೆ. ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಹಾಗೂ ಸುನೀಲ್ ಗವಾಸ್ಕರ್ ಅಗ್ರ ಮೂರು ಸ್ಥಾನಗಳನ್ನು ಅಲಂಕರಿಸಿದ್ದಾರೆ.
ʻರಾಹುಲ್ ದ್ರಾವಿಡ್ ನನಗೆ ಯಾವಾಗಲೂ ವಿಶೇಷʼ: ಕನ್ನಡಿಗನನ್ನು ಶ್ಲಾಘಿಸಿದ ರೋಹಿತ್ ಶರ್ಮಾ!
ಟೆಸ್ಟ್ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಭಾರತೀಯ ನಾಯಕ
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಅತ್ಯಂತ ಯಶಸ್ವಿ ಭಾರತೀಯ ನಾಯಕ ಎನಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ 68 ಪಂದ್ಯಗಳನ್ನು ಆಡಿದ್ದು,40 ರಲ್ಲಿ ಗೆಲುವು ಪಡೆದಿದೆ. ಅಂದಹಾಗೆ
2016-2019ರ ಅವಧಿಯಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು 43 ಟೆಸ್ಟ್ ಪಂದ್ಯಗಳಲ್ಲಿ 66.79ರ ಸರಾಸರಿಯಲ್ಲಿ 4,208 ರನ್ ಗಳಿಸಿದ್ದಾರೆ. ಅವರು 69 ಇನಿಂಗ್ಸ್‌ಗಳಲ್ಲಿ 16 ಶತಕಗಳು ಮತ್ತು 10 ಅರ್ಧಶತಕಗಳನ್ನು ಗಳಿಸಿದ್ದಾರೆ.