ಧನಶ್ರೀ ವರ್ಮಾಗೆ 4.75 ಕೋಟಿ ರೂ. ಜೀವನಾಂಶ ನೀಡಲು ಯುಜ್ವೇಂದ್ರ ಚಹಲ್ ಒಪ್ಪಿಗೆ!
Yuzvendra Chahal And Dhanashree Verma Divorce: ಭಾರತದ ಹಿರಿಯ ಸ್ಪಿನ್ನರ್ ಯುಜ್ವೇದ್ರ ಚಹಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಅವರ ವಿಚ್ಛೇದನ ಪ್ರಕರಣದಲ್ಲಿ ಆರು ತಿಂಗಳ ಕಾಯುವ ಅವಧಿಯನ್ನು ಮನ್ನಾ ಮಾಡಲು ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ. ಮಾರ್ಚ್ 20ರೊಳಗೆ ತೀರ್ಮಾನ ನೀಡುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ಸೂಚಿಸಿದೆ.

ಧನಶ್ರೀ ವರ್ಮಾಗೆ 4.75 ಕೋಟಿ ರೂ. ನೀಡಲು ಒಪ್ಪಿದ ಯುಜ್ವೇಂದ್ರ ಚಹಲ್.

ನವದೆಹಲಿ: ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಹಲ್ (Yuzvendra Chahal) ಮತ್ತು ಅವರ ಪತ್ನಿ ಧನಶ್ರೀ ವರ್ಮಾ (Dhanashree Verma) ಅವರ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶವೊಂದು ಹೊರ ಬಿದ್ದಿದೆ. ವಿಚ್ಛೇದನದ ನಂತರ 6 ತಿಂಗಳ ಕಡ್ಡಾಯ ಕಾಯುವ ಅವಧಿಯನ್ನು ಮನ್ನಾ ಮಾಡಲು ದಂಪತಿಗಳಿಗೆ ಬಾಂಬೆ ಹೈಕೋರ್ಟ್‌ನ ಆದೇಶ ಅವಕಾಶ ನೀಡಿದೆ. ಮಾರ್ಚ್ 22 ರಂದು ಆರಂಭವಾಗಲಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಯುಜ್ವೇಂದ್ರ ಚಹಲ್ ಪಂಜಾಬ್ ಕಿಂಗ್ಸ್ ಪರ ಆಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರ್ಚ್ 22ಕ್ಕೂ ಮುನ್ನ ಅಂದರೆ ಮಾರ್ಚ್ 20 ರೊಳಗೆ ಯುಜ್ವೇದ್ರ ಚಹಲ್ ಮತ್ತು ಧನಶ್ರೀ ವರ್ಮಾ ಅವರ ವಿಚ್ಛೇದನ ಅರ್ಜಿಯನ್ನು ನಿರ್ಧರಿಸುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ಗೌರವಾನ್ವಿತ ನ್ಯಾಯಾಲಯವು ನಿರ್ದೇಶಿಸಿದೆ.
ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಯುಜ್ವೇಂದ್ರ ಚಹಲ್ ಅವರು ಭಾಗವಹಿಸುವುದನ್ನು ಗಮನದಲ್ಲಿಟ್ಟುಕೊಂಡು ನಾಳೆಯೊಳಗೆ ವಿಚ್ಛೇದನ ಅರ್ಜಿಯನ್ನು ನಿರ್ಧರಿಸುವಂತೆ ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ಅವರ ಪೀಠವು ಕೌಟುಂಬಿಕ ನ್ಯಾಯಾಲಯಕ್ಕೆ ಸೂಚಿಸಿದೆ ಎಂದು ವರದಿಯಾಗಿದೆ.
ಐಪಿಎಲ್ ಟೂರ್ನಿಯ ಬಳಿಕ ಕೌಂಟಿ ಚಾಂಪಿಯನ್‌ಷಿಪ್ ಆಡಲಿರುವ ಯುಜ್ವೇಂದ್ರ ಚಹಲ್!
2020ರ ಡಿಸೆಂಬರ್ ತಿಂಗಳಲ್ಲಿ ವಿವಾಹವಾಗಿದ್ದ ಯುಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಜೂನ್ 2022 ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಕಳೆದ ತಿಂಗಳು ಫೆಬ್ರವರಿಯಲ್ಲಿ ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದರು. ಕಾಯುವ ಅವಧಿಯನ್ನು ಮನ್ನಾ ಮಾಡಲು ಅರ್ಜಿಯೊಂದಿಗೆ ದಂಪತಿಗಳು ಅರ್ಜಿಯನ್ನು ಸಹ ಸಲ್ಲಿಸಿದ್ದರು. ಸೆಕ್ಷನ್ 13 ಬಿ(2) ಪ್ರಕಾರ, ಕೌಟುಂಬಿಕ ನ್ಯಾಯಾಲಯವು ವಿಚ್ಛೇದನಕ್ಕಾಗಿ ಪರಸ್ಪರ ಅರ್ಜಿಯನ್ನು ಸಲ್ಲಿಸಿದ ದಿನಾಂಕದಿಂದ ಆರು ತಿಂಗಳ ನಂತರ ಮಾತ್ರ ಪರಿಗಣಿಸಬಹುದು.
ಸಮಸ್ಯೆಯನ್ನು ಪರಿಹರಿಸಲು ಮತ್ತು ಅವರ ಮದುವೆಯನ್ನು ಸರಿಪಡಿಸಲು ದಂಪತಿಗಳಿಗೆ ಕೂಲಿಂಗ್ ಆಫ್ ಅವಧಿಯನ್ನು ನೀಡಲಾಗುತ್ತದೆ. ಆದರೆ, ಚಹಲ್ ಮತ್ತು ಧನಶ್ರೀ ಎರಡು ವರ್ಷಕ್ಕೂ ಹೆಚ್ಚು ಕಾಲ ಪರಸ್ಪರ ದೂರವಾಗಿರುವುದರಿಂದ, ಬಾಂಬೆ ಹೈಕೋರ್ಟ್ ಈ ಪ್ರಕರಣದಲ್ಲಿ ಕಾಯುವ ಅವಧಿಯನ್ನು ಅನ್ವಯಿಸುವುದಿಲ್ಲ ಎಂದು ಹೇಳಿದೆ. ಅಂದಹಾಗೆ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನವನ್ನು ಸೂಚಿಸುವ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13 ಬಿ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ.
ಮಹ್ವಾಶ್ ಜತೆ ಕಾಣಿಸಿದ ಬೆನ್ನಲ್ಲೇ ಚಹಲ್‌ಗೆ ತಕ್ಕ ತಿರುಗೇಟು ಕೊಟ್ಟ ಮಾಜಿ ಪತ್ನಿ
ಧನಶ್ರೀ ವರ್ಮಾಗೆ 4.75 ಕೋಟಿ ರೂ ಜೀವನಾಂಶ
ಫೆಬ್ರವರಿ 20 ರಂದು ಚಹಲ್ ಮತ್ತು ಧನಶ್ರೀ ನಡುವಿನ ಒಪ್ಪಂದದ ನಿಯಮಗಳಿಗೆ ಭಾಗಶಃ ಅನುಸರಣೆಯನ್ನು ಉಲ್ಲೇಖಿಸಿ, ಕಡ್ಡಾಯವಾದ 6 ತಿಂಗಳ ಕೂಲಿಂಗ್ ಆಫ್ ಅವಧಿಯನ್ನು ಮನ್ನಾ ಮಾಡಲು ನ್ಯಾಯಾಲಯ ನಿರಾಕರಿಸಿತ್ತು. ಒಪ್ಪಿಗೆಯ ಷರತ್ತುಗಳ ಪ್ರಕಾರ ಚಹಲ್ ಪತ್ನಿ ಧನಶ್ರೀಗೆ 4 ಕೋಟಿ 75 ಲಕ್ಷ ರೂಪಾಯಿ ಜೀವನಾಂಶ ನೀಡಲು ಒಪ್ಪಿದ್ದರು. ಆದರೆ, ಕ್ರಿಕೆಟಿಗ ಈವರೆಗೆ ಕೇವಲ 2 ಕೋಟಿ 37 ಲಕ್ಷ 55 ಸಾವಿರ ರೂ ನೀಡಿದ್ದಾರೆಂದು ವರದಿಯಾಗಿದೆ.
ಇನ್ನುಳಿದ ಮೊತ್ತವನ್ನು ಪಾವತಿಸದಿರುವುದು ಅನುಸರಣೆಯ ಪ್ರಕರಣವೆಂದು ನ್ಯಾಯಾಲಯವು ಪರಿಗಣಿಸಿದೆ. ಆದ್ದರಿಂದ ಕೂಲಿಂಗ್ ಆಫ್ ಅವಧಿಯ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಕೌಟುಂಬಿಕ ಸಲಹೆಗಾರರ ವರದಿಯನ್ನು ಪರಿಶೀಲಿಸಿದ ನಂತರ ಕೌಟುಂಬಿಕ ನ್ಯಾಯಾಲಯವು ಈ ನಿರ್ಧಾರವನ್ನು ತೆಗೆದುಕೊಂಡಿತ್ತು, ಅದು ಪಾಲಿಸದ ಪ್ರಕರಣಗಳನ್ನು ಎತ್ತಿ ತೋರಿಸಿದೆ.