Sunday, 15th December 2024

ರಾಷ್ಟ್ರಗೀತೆಗೆ ಅವಮಾನ: ಕೊಹ್ಲಿ ವಿರುದ್ಧ ಭಾರಿ ಆಕ್ರೋಶ

ಕೇಪ್‌ಟೌನ್: ಭಾನುವಾರ ಕೇಪ್‌ಟೌನ್‌ನ ನ್ಯೂಲೆಂಡ್ಸ್‌ ಕ್ರೀಡಾಂಗಣದಲ್ಲಿ ನಡೆದ 3ನೇ ಏಕದಿನ ಕ್ರಿಕೆಟ್‌ ಪಂದ್ಯದ ವೇಳೆ ರಾಷ್ಟ್ರಗೀತೆಗೆ ಅವಮಾನ ಮಾಡಿದ ಮಾಜಿ ನಾಯಕ ವಿರಾಟ್‌ ಕೊಹ್ಲಿ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ.

 ಪಂದ್ಯದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡುತ್ತಿದ್ದಾಗ ವಿರಾಟ್‌ ಕೊಹ್ಲಿ ಚೂಯಿಂಗ್‌ ಗಮ್‌ ಜಗಿಯುತ್ತಾ ನಿಂತಿದ್ದರು. ತಂಡದ ನಾಯಕತ್ವ ಕಳೆದುಕೊಂಡ ಕಾರಣ ಭಾರತ ತಂಡದ ಸಾಲಿನಲ್ಲಿ ಮೊದಲಿಗನಾಗಿ ವಿರಾಟ್‌ ಕೊಹ್ಲಿ ನಿಂತಿರಲಿಲ್ಲ. ಆದರೆ ರಾಷ್ಟ್ರಗೀತೆ ಆರಂಭವಾದ ಬಳಿಕ ಕ್ಯಾಮೆರಾ ಇವರ ಕಡೆಗೆ ಫೋಕಸ್‌ ಆಗಿತ್ತು. ಇದು ನೇರ ಪ್ರಸಾರದಲ್ಲಿ ಕಂಡುಬಂದಿದೆ.

ಇದನ್ನು ಕಂಡು ಭಾರತೀಯರು ಬಹಳ ಗರಂ ಆಗಿದ್ದು, ರಾಷ್ಟ್ರಗೀತೆ ವೇಳೆ ಚೂಯಿಂಗ್‌ ಗಮ್‌ ಜಗಿಯುತ್ತಾ ನಿಂತಿರುವ ಈ ವ್ಯಕ್ತಿ ನಮ್ಮ ದೇಶದ ರಾಯಭಾರಿನಾ ಎಂದು ಟ್ರೋಲ್‌ ಮಾಡುತ್ತಿದ್ದಾರೆ.