Thursday, 19th September 2024

ಗೆದ್ದು ಅಗ್ರಸ್ಥಾನಕ್ಕೇರಿದ ಚೆನ್ನೈ ಕಿಂಗ್ಸ್, ಮಂಕಾದ ಆರ್‌.ಸಿ.ಬಿ

ಶಾರ್ಜಾ: ಬ್ಯಾಟ್ಸ್ ಮನ್ ಗಳ ಸಂಘಟಿತ ಪ್ರದರ್ಶನ ಹಾಗೂ ಆಲ್ ರೌಂಡರ್ ಡ್ವೆಯ್ನ್ ಬ್ರಾವೊ ಅವರ ಅಮೋಘ ಬೌಲಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಐಪಿಎಲ್ ನ 35ನೇ ಪಂದ್ಯವನ್ನು 6 ವಿಕೆಟ್ ಗಳ ಅಂತರದಿಂದ ಗೆದ್ದು ಕೊಂಡಿದೆ.

ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ತೋರಿದ ಭರ್ಜರಿ ನಿರ್ವಹಣೆ ಎದುರು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಸಂಪೂರ್ಣ ಮಂಕಾ ಯಿತು. ಐಪಿಎಲ್-14ರ ಎರಡನೇ ಭಾಗದಲ್ಲಿ ಸತತ 2ನೇ ಸೋಲನುಭವಿಸಿತು. ಅಂಕಪಟ್ಟಿಯಲ್ಲಿ ಮೇಲೇರುವ ಲೆಕ್ಕಾಚಾರದಲ್ಲಿದ್ದ ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲೇ ಉಳಿಯಿತು. ಮತ್ತೊಂದೆಡೆ, ಸತತ 2ನೇ ಜಯ ಕಂಡ ಎಂಎಸ್ ಧೋನಿ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಮೂಲಕ ಪ್ಲೇಆಫ್ ಹಂತಕ್ಕೆ ಮತ್ತಷ್ಟು ಸನಿಹವಾಯಿತು.

ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಪರ ಕೊಹ್ಲಿ-ಪಡಿಕಲ್ ಜೋಡಿ ಮೊದಲ ವಿಕೆಟ್‌ಗೆ 111 ರನ್ ಕಲೆ ಹಾಕಿದರೂ, ಸ್ಲಾಗ್ ಓವರ್‌ಗಳಲ್ಲಿ ವೇಗಿಗಳಾದ ಡ್ವೇನ್ ಬ್ರಾವೊ (24ಕ್ಕೆ 3) ಹಾಗೂ ಶಾರ್ದೂಲ್ ಠಾಕೂರ್ (29ಕ್ಕೆ 2) ಆಘಾತ ನೀಡಿದರು. ಇದರಿಂದ ದಿಢೀರ್ ಕುಸಿತ ಕಂಡ ಆರ್‌ಸಿಬಿ 6 ವಿಕೆಟ್‌ಗೆ 156 ರನ್‌ಗಳ ಸ್ಪರ್ಧಾತ್ಮಕ ಮೊತ್ತಕ್ಕೆ ತೃಪ್ತಿಪಟ್ಟಿತು. ಪ್ರತಿಯಾಗಿ ಸವಾಲನ್ನು ಬೆನ್ನಟ್ಟಿದ ಸಿಎಸ್‌ಕೆ, 18.1 ಓವರ್‌ಗಳಲ್ಲಿ 4 ವಿಕೆಟ್‌ಗೆ 157 ರನ್‌ಗಳಿಸಿ ಜಯದ ನಗೆ ಬೀರಿತು. ಇದರೊಂದಿಗೆ ಪ್ರಸಕ್ತ ಲೀಗ್‌ನಲ್ಲಿ ಸಿಎಸ್‌ಕೆ ಎದುರು ಆರ್‌ಸಿಬಿ ಎರಡು ಮುಖಾಮುಖಿಯಲ್ಲೂ ಸೋಲು ಕಂಡಿತು.

ಆರ್ ಸಿಬಿ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ಗೆಲ್ಲಲು 157 ರನ್ ಗುರಿ ಪಡೆದಿದ್ದ ಚೆನ್ನೈ ತಂಡ 18.1 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು.

ಆರ್‌ಸಿಬಿ: 6 ವಿಕೆಟ್‌ಗೆ 156

(ವಿರಾಟ್ ಕೊಹ್ಲಿ 53, ದೇವದತ್ ಪಡಿಕಲ್ 70, ಎಬಿಡಿ 12, ಮ್ಯಾಕ್ಸ್‌ವೆಲ್ 11, ಶಾರ್ದೂಲ್ ಠಾಕೂರ್ 29ಕ್ಕೆ 2, ಡ್ವೇನ್ ಬ್ರಾವೊ 24ಕ್ಕೆ 3),

ಸಿಎಸ್‌ಕೆ: 18.1 ಓವರ್‌ಗಳಲ್ಲಿ 4 ವಿಕೆಟ್‌ಗೆ 157

(ಋತುರಾಜ್ ಗಾಯಕ್ವಾಡ್ 38, ಫಾಫ್ ಡು ಪ್ಲೆಸಿಸ್ 31, ಮೊಯಿನ್ ಅಲಿ 23, ರಾಯುಡು 32, ಸುರೇಶ್ ರೈನಾ 17*, ಧೋನಿ 11*, ಹರ್ಷಲ್ ಪಟೇಲ್ 25ಕ್ಕೆ 2).

Leave a Reply

Your email address will not be published. Required fields are marked *