ಚೆನ್ನೈ: ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್ ಗಳಿಂದ ಮಣಿಸಿ, ಶುಭಾರಂಭ ಮಾಡಿತು.
ಮೊದಲ ಪಂದ್ಯದಲ್ಲಿಯೇ ಟಾಸ್ ಗೆದ್ದ ಆರ್ಸಿಬಿ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಫಾಫ್ ಪಡೆ 20 ಓವರ್ ಗೆ 6 ವಿಕೆಟ್ ನಷ್ಟಕ್ಕೆ 173 ರನ್ ಗಳಿಸುವ ಮೂಲಕ ಚೆನ್ನೈ ತಂಡಕ್ಕೆ 174 ರನ್ ಗಳ ಬಿಗ್ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿಗದಿತ 18.4 ಓವರ್ಗೆ 4 ವಿಕೆಟ್ ನಷ್ಟಕ್ಕೆ 176 ರನ್ ಗಳಿಸುವ ಮೂಲಕ ಚೆನ್ನೈ 6 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿತು.
ಆರ್ಸಿಬಿ ನೀಡಿದ ಬಿಗ್ ಟಾರ್ಗೆಟ್ ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಸಾಧಾರಣ ಆರಂಭ ದೊರಕಿತು. ನಾಯಕ ರುತುರಾಜ್ ಗಾಯಕ್ವಾಡ 15 ರನ್ ಸಿಡಿಸಿ ಔಟ್ ಆದರು. ಚೊಚ್ಚಲ ಬಾರಿಗೆ ಐಪಿಎಲ್ ಆಡಿದ ಕನ್ನಡಿಗ ರಚಿನ್ ರವೀಂದ್ರ 15 ಎಸೆತದಲ್ಲಿ 3 ಸಿಕ್ಸ್ ಮತ್ತು 3 ಬೌಂಡರಿ ಮೂಲಕ 37 ರನ್ ಗಳಿಸಿ ಅಬ್ಬರಿಸಿ ದರು. ಅಜಿಂಕ್ಯಾ ರಹಾನೆ ಸಹ 19 ಎಸೆತದಲ್ಲಿ 27 ರನ್ ಸಿಡಿಸಿದರು. ಶಿವಂ ದುಬೆ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಗೆಲುವನ್ನು ತರಲುವಲ್ಲಿ ಪ್ರಮುಖರಾದರು. ದುಬೆ 34 ರನ್ ಹಾಗೂ ಕೊನೆಯಲ್ಲಿ ರವೀಂದ್ರ ಜಡೇಜಾ 25 ರನ್ ಸಿಡಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ನಾಯಕ ಫಾಫ್ ಡುಪ್ಲೇಸಿಸ್ 23 ಎಸೆತದಲ್ಲಿ 8 ಬೌಂಡರಿ ಸಹಿತ 35 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರೆ, ಬಳಿಕ ಬಂದ ರಜತ್ ಪಟೇದಾರ್ ಶೂನ್ಯ ಮತ್ತು ಗ್ಲೇನ್ ಮ್ಯಾಕ್ಸ್ವೆಲ್ ಸಹ ಶೂನ್ಯಕ್ಕೆ ಔಟ್ ಆದರು. ವಿರಾಟ್ ಕೊಹ್ಲಿ ಸಹ 20 ಎಸೆತದಲ್ಲಿ 1 ಸಿಕ್ಸ್ ಸಹಿತ 21 ರನ್ ಸಿಡಿಸಿ ಪೆವೆಲಿಯನ್ ಸೇರಿದರು. ಕೆಮರೂನ್ ಗ್ರೀನ್ ಸಹ 18 ರನ್ ಸಿಡಿಸಿ ಔಟ್ ಆದರು. ಬಳಿಕ ಜೊತೆಯಾದ ಅನುಜ್ ರಾವತ್ ಮತ್ತು ದಿನೇಶ್ ಕಾರ್ತಿಕ್ ತಾಳ್ಮೆಯಿಂದ ಉತ್ತಮ ಜೊತೆಯಾಟವಾಡಿದರು. ಈ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಲುವಲ್ಲಿ ಸಹಾಯಕರಾದರು.
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆರಂಭದಲ್ಲಿ ಕೊಂಚ ಹಿನ್ನಡೆಯಾದರೂ ಸಹ ಬಳಿಕ ಉತ್ತಮ ಆರಂಭ ದೊರಕಿತು. ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆಯುವಲ್ಲಿ ಯಶಸ್ವಿ ಆಯಿತು. ಚೆನ್ನೈ ಪರ ಮುಸ್ತಾಫಿಜುರ್ ರಹಮಾನ್ 4 ಓವರ್ ಗೆ 29 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಮಚಿದರು. ಇತ್ತ ದೀಪಕ್ ಚಹಾರ್ 4 ಓವರ್ ಗೆ 37 ರನ್ ನಿಡಿ 1 ವಿಕೆಟ್ ಪಡೆದರು.