Thursday, 12th December 2024

ಆಸೀಸ್ ಬಿಗು ಬೌಲಿಂಗ್ ದಾಳಿ: ಎರಡು ವಿಕೆಟ್‌ ಪಡೆದ ಕಮಿನ್ಸ್

ಮೆಲ್ಬರ್ನ್: ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಆತಿಥೇಯ ಆಸೀಸ್ ಪರ ಬಿಗು ಬೌಲಿಂಗ್ ದಾಳಿ ನಡೆಸಿದ ಪ್ಯಾಟ್ ಕಮಿನ್ಸ್ ಎರಡು ವಿಕೆಟ್ ಪಡೆದು ಮಿಂಚಿದರು.

ಒಂದು ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿದ್ದಲ್ಲಿಂದ ಎರಡನೇ ದಿನದಾಟ ಆರಂಭಿಸಿದ ಭಾರತದ ಮೊತ್ತ 61 ರನ್ ಆಗುವಾಗ 45 ರನ್ ಗಳಿಸಿದ ಗಿಲ್ ಔಟಾದರು. ಎರಡನೇ ಓವರ್ ಅಂತರದಲ್ಲಿ 17 ರನ್ ಗಳಿಸಿದ್ದ ಪೂಜಾರಾ ಕೂಡಾ ವಿಕೆಟ್ ಒಪ್ಪಿಸಿದರು.

43 ಓವರ್ ಬಳಿಕ ಭಾರತ ಮೂರು ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿದೆ. ನಾಯಕ ರಹಾನೆ 16 ರನ್ ಮತ್ತು ಹನುಮ ವಿಹಾರಿ 16 ರನ್ ಗಳಿಸಿ ಆಡುತ್ತಿದ್ದಾರೆ. ಭಾರತ 90 ರನ್ ಹಿನ್ನಡೆಯಲ್ಲಿದೆ.

ಆಸೀಸ್ ಪರ ಪ್ಯಾಟ್ ಕಮಿನ್ಸ್ ಎರಡು, ಸ್ಟಾರ್ಕ್ ಒಂದು ವಿಕೆಟ್ ಪಡೆದರು. ಆಸೀಸ್ ಮೊದಲ ಇನ್ನಿಂಗ್ಸ್ ನಲ್ಲಿ 195 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತ್ತು.