Saturday, 14th December 2024

ಟೇಬಲ್‌ ಟೆನಿಸ್‌: ಕ್ವಾರ್ಟರ್‌ ಫೈನಲ್‌’ಗೆ ಮಣಿಕಾ ಬಾತ್ರಾ, ಶ್ರೀಜಾ ಅಕುಲಾ

ಬರ್ಮಿಂಗ್‌ಹ್ಯಾಮ್: ಟೇಬಲ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಮಣಿಕಾ ಬಾತ್ರಾ ಮತ್ತು ಶ್ರೀಜಾ ಅಕುಲಾ ಅವರು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಮಣಿಕಾ 11-4, 11-8, 11-6, 12-10 ರಲ್ಲಿ ಆಸ್ಟ್ರೇಲಿಯಾದ ಜೀ ಮಿನ್‌ಯಂಗ್‌ ಅವರನ್ನು ಮಣಿಸಿದರು. ಮಣಿಕಾ ಮುಂದಿನ ಪಂದ್ಯದಲ್ಲಿ ಸಿಂಗಪುರದ ಜಿಯಾನ್‌ ಜೆಂಗ್‌ ಎದುರು ಸೆಣಸುವರು.

ಇನ್ನೊಂದು ಪಂದ್ಯದಲ್ಲಿ ಶ್ರೀಜಾ 8-11, 11-7, 12-14, 9-11, 11-4, 15-13, 12-10 ರಲ್ಲಿ ವೇಲ್ಸ್‌ನ ಚಾರ್ಲೊಟ್ ಕೇರಿ ಎದುರು ಗೆದ್ದರು. 1-3 ಗೇಮ್‌ಗಳಿಂದ ಹಿನ್ನಡೆ ಅನುಭವಿಸಿದ್ದ ಶ್ರೀಜಾ, ಆ ಬಳಿಕ ಅಮೋಘ ರೀತಿಯಲ್ಲಿ ತಿರುಗೇಟು ನೀಡಿ ಗೆಲುವು ಒಲಿಸಿಕೊಂಡರು. ಶ್ರೀಜಾ ಕ್ವಾರ್ಟರ್‌ ಫೈನಲ್‌ನಲ್ಲಿ ಕೆನಡಾದ ಮೊ ಜಾಂಗ್‌ ಅವರ ಸವಾಲು ಎದುರಿಸು ವರು.

ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಬಾತ್ರಾ ಮತ್ತು ಜಿ. ಸತ್ಯನ್‌ 11-7, 11-6, 11-7 ರಲ್ಲಿ ನೈಜೀರಿ ಯದ ಒಲಾಜಿದ್ ಒಮೊಟಯೊ- ಅಜೊಕ್ ಒಜೊಮು ಎದುರು ಗೆದ್ದು ಎಂಟರಘಟ್ಟಕ್ಕೆ ಲಗ್ಗೆಯಿಟ್ಟರು.

ಶ್ರೀಜಾ ಮತ್ತು ಅಚಂತಾ ಶರತ್ ಕಮಲ್‌ 5-11, 11-2, 11-6, 11-5 ರಲ್ಲಿ ಮಲೇಷ್ಯಾದ ಲಿಯೊಂಡ್ ಚೀ ಫಾಂಗ್- ಹೊ ಯಿಂಗ್ ಅವರನ್ನು ಸೋಲಿಸಿದರು.