Thursday, 12th December 2024

ಚೆನ್ನೈಗೆ ನಿರಾಯಾಸ ಗೆಲುವು, ಮಿಂಚಿದ ದೀಪಕ್‌ ಚಹರ್‌

ಮುಂಬೈ: ಐಪಿಎಲ್ ಟೂರ್ನಿಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲ್ಲಲು ಸುಲಭ ಸವಾಲು ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ನಿರಾಯಾಸ ಗೆಲುವು ದಾಖಲಿಸಿದೆ.

ಗೆಲ್ಲಲು ಕೇವಲ 107 ರನ್ ಗುರಿ ಪಡೆದ ಚೆನ್ನೈ ತಂಡ 15.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿ ಗೆಲುವಿನ ದಡ ಸೇರಿತು. ಚೆನ್ನೈ ಪರ ಆಲ್ ರೌಂಡರ್ ಮೊಯಿನ್ ಅಲಿ(46) ಹಾಗೂ ಆರಂಭಿಕ ಬ್ಯಾಟ್ಸ್ ಮನ್ ಎಫ್ ಡು ಪ್ಲೆಸಿಸ್ (ಔಟಾಗದೆ 36) ಕಾಣಿಕೆ ನೀಡಿದರು.

ಪಂಜಾಬ್ ಬೌಲಿಂಗ್ ವಿಭಾಗದಲ್ಲಿ ಮುಹಮ್ಮದ್ ಶಮಿ(2-21) ಯಶಸ್ವಿ ಬೌಲರ್ ಎನಿಸಿಕೊಂಡರು. ಅರ್ಷ ದೀಪ್ ಸಿಂಗ್(1-7) ಹಾಗೂ ಮುರುಗನ್ ಅಶ್ವಿನ್ (1-32)ತಲಾ ಒಂದು ವಿಕೆಟ್ ಪಡೆದರು.

ಟಾಸ್ ಜಯಿಸಿದ ನಾಯಕ ಎಂ.ಎಸ್. ಧೋನಿ ಪಂಜಾಬ್ ತಂಡವನ್ನು ಮೊದಲಿಗೆ ಬ್ಯಾಟಿಂಗ್ ಗೆ ಆಹ್ವಾನಿಸಿದರು. ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 106 ರನ್ ಗಳಿಸಲಷ್ಟೇ ಶಕ್ತವಾಯಿತು.

ಈ ಮೂಲಕ ಚೆನ್ನೈ ತಂಡ, ನಾಯಕ ಧೋನಿಗೆ ಅವರ ಇನ್ನೂರನೇ ಪಂದ್ಯದಲ್ಲಿ ಗೆಲುವಿನ ಗಿಫ್ಟ್ ನೀಡಿದೆ.