Saturday, 14th December 2024

ಡೆಲ್ಲಿ ಕ್ಯಾಪಿಟಲ್ಸ್ ರಭಸಕ್ಕೆ ಪಂಜಾಬ್‌ ಚಿಂದಿ

ಮುಂಬೈ: ಬೌಲರ್‌ಗಳ ಸಂಘಟನಾತ್ಮಕ ದಾಳಿಯ ಜತೆಗೆ ಆರಂಭಿಕರಾದ ಡೇವಿಡ್ ವಾರ್ನರ್ (60*ರನ್) ಹಾಗೂ ಪೃಥ್ವಿ ಷಾ (41 ರನ್) ಜೋಡಿಯ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವಿನ ಲಯಕ್ಕೆ ಮರಳಿತು.

ಬ್ರಬೋರ್ನ್ ಸ್ಟೇಡಿಯಂನಲ್ಲಿ ರಿಷಭ್ ಪಂತ್ ಪಡೆ 9 ವಿಕೆಟ್‌ಗಳಿಂದ ಕನ್ನಡಿಗ ಮಯಾಂಕ್ ಅಗರ್ವಾಲ್ ಸಾರಥ್ಯದ ಪಂಜಾಬ್ ಕಿಂಗ್ಸ್ ತಂಡ ವನ್ನು ಸೋಲಿಸಿತು. ಪಂಜಾಬ್ ತಂಡಕ್ಕಿದು ಸತತ 2ನೇ ಸೋಲಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಪಂಜಾಬ್ ತಂಡ, ಡೆಲ್ಲಿ ಬೌಲರ್‌ಗಳ ಮಾರಕ ದಾಳಿ ಎದುರು ಸಂಪೂರ್ಣ ಮಂಕಾಯಿತು.

ನಾಯಕ ಮಯಾಂಕ್ ಅಗರ್ವಾಲ್ (24 ರನ್) ಕೆಲಕಾಲ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಉತ್ತಮ ಆರಂಭದ ಭರವಸೆ ಮೂಡಿಸಿದರೂ 20 ಓವರ್‌ಗಳಲ್ಲಿ 115 ರನ್‌ಗಳಿಗೆ ಸರ್ವಪತನ ಕಂಡಿತು. ಡೆಲ್ಲಿ ಪರ ಖಲೀಲ್ ಅಹ್ಮದ್, ಲಲಿತ್ ಯಾದವ್, ಅಕ್ಷರ್ ಪಟೇಲ್ ಹಾಗೂ ಕುಲದೀಪ್ ಯಾದವ್ ತಲಾ 2 ವಿಕೆಟ್ ಕಬಳಿಸಿದರು. ಪ್ರತಿಯಾಗಿ, ಡೆಲ್ಲಿ ತಂಡ ಪೃಥ್ವಿ ಷಾ ಹಾಗೂ ಡೇವಿಡ್ ವಾರ್ನರ್ ಜೋಡಿ ಮೊದಲ ವಿಕೆಟ್‌ಗೆ 39 ಎಸೆತಗಳಲ್ಲಿ 83 ರನ್ ಪೇರಿಸಿದ ಫಲವಾಗಿ 10.3 ಓವರ್‌ಗಳಲ್ಲಿ 119 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

ಪಂಜಾಬ್ ಕಿಂಗ್ಸ್: 20 ಓವರ್‌ಗಳಲ್ಲಿ 115 (ಮಯಾಂಕ್ ಅಗರ್ವಾಲ್ 24, ಜಿತೇಶ್ ಶರ್ಮ 32, ಶಾರುಖ್ ಖಾನ್ 12, ಖಲೀಲ್ ಅಹಮದ್ 21ಕ್ಕೆ 2, ಲಲಿತ್ ಯಾದವ್ 11ಕ್ಕೆ 2, ಅಕ್ಷರ್ ಪಟೇಲ್ 10ಕ್ಕೆ 2, ಕುಲದೀಪ್ ಯಾದವ್ 24ಕ್ಕೆ 2),

ಡೆಲ್ಲಿ ಕ್ಯಾಪಿಟಲ್ಸ್: 10.3 ಓವರ್‌ಗಳಲ್ಲಿ 1 ವಿಕೆಟ್‌ಗೆ 119 (ಡೇವಡ್ ವಾರ್ನರ್ 60, ಪೃಥ್ವಿ ಷಾ 41, ರಾಹುಲ್ ಚಹರ್ 21ಕ್ಕೆ 1).