ನವದೆಹಲಿ: ಬ್ಯಾಟ್ಸ್ಮನ್ ಶಿಖರ್ ಧವನ್ ಸಾರಥ್ಯದ ನಿಗದಿತ ಓವರ್ಗಳ ಭಾರತ ತಂಡ, ಶ್ರೀಲಂಕಾ ಪ್ರವಾಸ ತೆರಳುವುದಕ್ಕೂ ಮುನ್ನ ಜೂ. 14 ರಿಂದ 28 ರವರೆಗೆ ಮುಂಬೈನಲ್ಲಿ ಕ್ವಾರಂಟೈನ್ಗೆ ಒಳಗಾಗಲಿದೆ.
ಈ ಅವಧಿಯಲ್ಲಿ 6 ಬಾರಿ ಆರ್ಟಿ- ಪಿಸಿಆರ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಜುಲೈ 13 ರಿಂದ ಭಾರತ ಹಾಗೂ ಶ್ರೀಲಂಕಾ ನಡುವೆ ಕೊಲಂಬೊದಲ್ಲಿ 3 ಏಕದಿನ ಹಾಗೂ ಟಿ20 ಪಂದ್ಯಗಳ ಸರಣಿ ನಡೆಯಲಿದೆ.
ಹೊರ ರಾಜ್ಯದ ಆಟಗಾರರು ಚಾರ್ಟರ್ ವಿಮಾನ ಹಾಗೂ ಬ್ಯುಸಿನೆಸ್ ಕ್ಲಾಸ್ ವಿಮಾನಗಳ ಮೂಲಕ ಮುಂಬೈಗೆ ಆಗಮಿಸ ಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. 7 ದಿನಗಳ ಕಾಲ ಕೊಠಡಿಯಲ್ಲೆ ಕ್ವಾರಂಟೈನ್ನಲ್ಲಿದ್ದರೆ, ಬಳಿಕ ಬಯೋಬಬಲ್ ವ್ಯಾಪ್ತಿಯಲ್ಲೇ ಆಟಗಾರರಿಗೆ ಜಿಮ್ ಸೇರಿದಂತೆ ಇನ್ನಿತರ ಕಡೆಗೆ ಓಡಾಡಲು ಅವಕಾಶ ನೀಡಲಾಗುತ್ತಿದೆ.
ಭಾರತ ತಂಡದ ಆಟಗಾರರು ಎಂದಿನಂತೆ ಕೊಲಂಬೊದಲ್ಲಿರುವ ತಾಜ್ ಸಮುದ್ರಾ ಹೋಟೆಲ್ನಲ್ಲೆ ಉಳಿದುಕೊಳ್ಳಲಿದ್ದಾರೆ.