Friday, 2nd June 2023

ಧವನ್ ನಾಯಕತ್ವದ ಟೀಮ್ ಇಂಡಿಯಾ: ನಾಳೆ ಮೊದಲ ಏಕದಿನ

ಮುಂಬೈ: ವೆಸ್ಟ್ ಇಂಡೀಸ್ ವಿರುದ್ದ ಧವನ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಏಕದಿನ ಸರಣಿ ಜುಲೈ 22ರಿಂದ ಆರಂಭವಾಗಲಿದೆ. ಟ್ರಿನಿಡಾಡ್​ನ ಕ್ವೀನ್ಸ್ ಪಾರ್ಕ್​ ಓವಲ್​ ಮೈದಾನದಲ್ಲಿ ನಡೆಯಲಿರುವ ಮೊದಲ ಪಂದ್ಯವು ಯಾರಿಗೆಲ್ಲಾ ಅವಕಾಶ ಸಿಗಲಿದೆ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ. ಸರಣಿಯಿಂದ ಹಿರಿಯ ಆಟಗಾರರು ಹೊರಗುಳಿದಿದ್ದಾರೆ. ಹೀಗಾಗಿ ತಂಡದ ನಾಯಕರಾಗಿ ಶಿಖರ್ ಧವನ್ ಆಯ್ಕೆಯಾಗಿದ್ದಾರೆ.

ಬಳಿಕ ಭಾರತ ತಂಡವು 5 ಪಂದ್ಯಗಳ ಟಿ20 ಸರಣಿ ಆಡಲಿದ್ದು, ಈ ಸರಣಿ ವೇಳೆಗೆ ರೋಹಿತ್ ಶರ್ಮಾ ಸೇರಿದಂತೆ ಪ್ರಮುಖ ಆಟಗಾರರು ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಭಾರತ vs ವೆಸ್ಟ್ ಇಂಡೀಸ್ ಮೊದಲ ಪಂದ್ಯ ಯಾವಾಗ?
ಶುಕ್ರವಾರ, ಜುಲೈ 22, 2022

ಪಂದ್ಯ ಶುರುವಾಗುವುದು ಎಷ್ಟು ಗಂಟೆಗೆ?
ಭಾರತೀಯ ಕಾಲಮಾನ ಸಂಜೆ 7 ಗಂಟೆಯಿಂದ ಪಂದ್ಯ ಶುರುವಾಗಲಿದೆ.

ವೆಸ್ಟ್ ಇಂಡೀಸ್ ಏಕದಿನ ತಂಡ ಹೀಗಿದೆ: ನಿಕೋಲಸ್ ಪೂರನ್ (ನಾಯಕ), ಶಾಯ್ ಹೋಪ್ (ಉಪನಾಯಕ), ಶಮ್ರಾ ಬ್ರೂಕ್ಸ್, ಕೆಸಿ ಕಾರ್ಟಿ, ಜೇಸನ್ ಹೋಲ್ಡರ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರೆಂಡನ್ ಕಿಂಗ್, ಕೈಲ್ ಮೈಯರ್ಸ್, ಗುಡಕೇಶ್ ಮೋತಿ, ಕೀಮೋ ಪಾಲ್, ರೋವ್‌ಮನ್ ಪೊವೆಲ್ ಮತ್ತು ಜೇಡನ್ ಸೀಲ್ಸ್.

ಮೀಸಲು ಆಟಗಾರರು: ರೊಮಾರಿಯೊ ಶೆಫರ್ಡ್, ಹೇಡನ್ ವಾಲ್ಷ್ ಜೂನಿಯರ್.

ಭಾರತ ಏಕದಿನ ತಂಡ ಹೀಗಿದೆ: ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್‌), ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ (ಉಪನಾಯಕ), ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

ಏಕದಿನ ಸರಣಿಯ ವೇಳಾಪಟ್ಟಿ

  • ಜುಲೈ 22- ಮೊದಲ ಏಕದಿನ ಪಂದ್ಯ (ಕ್ವೀನ್ಸ್ ಪಾರ್ಕ್​ ಓವಲ್)
  • ಜುಲೈ 24- 2ನೇ ಏಕದಿನ ಪಂದ್ಯ (ಕ್ವೀನ್ಸ್ ಪಾರ್ಕ್​ ಓವಲ್)
  • ಜುಲೈ 27- 3ನೇ ಏಕದಿನ ಪಂದ್ಯ (ಕ್ವೀನ್ಸ್ ಪಾರ್ಕ್​ ಓವಲ್)

ಟಿ20 ಸರಣಿ ವೇಳಾಪಟ್ಟಿ:

  • ಜುಲೈ 29 – ಮೊದಲ ಟಿ20 ಪಂದ್ಯ (ಲಾರಾ ಕ್ರಿಕೆಟ್ ಸ್ಟೇಡಿಯಂ)
  • ಆಗಸ್ಟ್ 1​- 2ನೇ ಟಿ20 ಪಂದ್ಯ (ವಾರ್ನರ್ ಪಾರ್ಕ್ ಸ್ಟೇಡಿಯಂ)
  • ಆಗಸ್ಟ್​ 2- 3ನೇ ಟಿ20 ಪಂದ್ಯ (ವಾರ್ನರ್ ಪಾರ್ಕ್)
  • ಆಗಸ್ಟ್​ 6- 4ನೇ ಟಿ20 ಪಂದ್ಯ (ಕೌಂಟಿ ಕ್ರಿಕೆಟ್ ಸ್ಟೇಡಿಯಂ)
  • ಆಗಸ್ಟ್ 7- 5ನೇ ಟಿ20 ಪಂದ್ಯ (ಕೌಂಟಿ ಕ್ರಿಕೆಟ್ ಸ್ಟೇಡಿಯಂ)
error: Content is protected !!