Thursday, 19th September 2024

Diamond League Final: ಕೇವಲ 1 ಸೆಂಟಿ ಮೀಟರ್ ಅಂತರದಲ್ಲಿ ಅಗ್ರಸ್ಥಾನ ಕಳೆದುಕೊಂಡ ನೀರಜ್ ಚೋಪ್ರಾ

Diamond League Final

ಬ್ರಸೆಲ್ಸ್‌ (ಬೆಲ್ಜಿಯಂ): ಬ್ರಸೆಲ್ಸ್‌ ಡೈಮಂಡ್‌ ಲೀಗ್‌ ಫೈನಲ್ಸ್‌ನಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತ, ಭಾರತದ ಸ್ಟಾರ್‌ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ(Neeraj Chopra) ಅವರು ಕೇವಲ ಒಂದು ಸೆಂಟಿ ಮೀಟರ್‌ ಅಂತರದಿಂದ ಮೊದಲ ಸ್ಥಾನದಿಂದ ವಂಚಿತರಾದರು. ನೀರಜ್ ಚೋಪ್ರಾ 87.86 ದೂರ ಎಸೆದು ದ್ವಿತೀಯ ಸ್ಥಾನ ಪಡೆದರು. ಅವರ ಮೂರನೇ ಎಸೆತದಲ್ಲಿ ಈ ದೂರ ದಾಖಲಾಯಿತು.

ಗ್ರೆನೆಡಾದ ಆಂಡರ್ಸನ್ ಪೀಟರ್ಸ್ ತಮ್ಮ ಮೊದಲ ಪ್ರಯತ್ನದಲ್ಲಿಯೇ 87.87 ಮೀಟರ್ ಎಸೆತ ದಾಖಲಿಸಿ ಅಗ್ರಸ್ಥಾನ ಪಡೆದರು. ಜರ್ಮನ್ ಆಟಗಾರ ಜೂಲಿಯನ್ ವೆಬ್ಬರ್‌ 85.97 ಮೀ. ಎಸೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. 26 ವರ್ಷದ ಭಾರತೀಯ ಅಥ್ಲೀಟ್, 2022 ರಲ್ಲಿ ಡೈಮಂಡ್ ಲೀಗ್ ಟ್ರೋಫಿಯನ್ನು ಗೆದ್ದು 2023 ರಲ್ಲಿ ಎರಡನೇ ಸ್ಥಾನ ಪಡೆದಿದ್ದರು.

ಇದನ್ನೂ ಓದಿ Diamond League Final: 9ನೇ ಸ್ಥಾನಕ್ಕೆ ತೃಪ್ತಿಪಟ್ಟ ಸಾಬ್ಳೆ; ಇಂದು ನೀರಜ್‌ ಕಣಕ್ಕೆ

ಚೋಪ್ರಾ ಅವರ ಈ ಋತುವಿನ ಅತ್ಯುತ್ತಮ ಜಾವೆಲಿನ್ ಎಸೆತವು ಆಗಸ್ಟ್‌ನಲ್ಲಿ ಲೌಸನ್ನೆಯಲ್ಲಿ ಬಂದಿತ್ತು. 89.49 ಮೀಟರ್‌ಗಳ ದೂರ ಎಸೆದು ವೃತ್ತಿಜೀವನದ ಎರಡನೇ ಅತ್ಯುತ್ತಮ ಥ್ರೋ ದಾಖಲಿಸಿದ್ದರು. ಪ್ಯಾರಿಸ್‌ನಲ್ಲಿ ಬೆಳ್ಳಿ-ಪದಕ ಗೆದ್ದ ಪ್ರಯತ್ನಕ್ಕಿಂತ ನಾಲ್ಕು ಸೆಂಟಿಮೀಟರ್‌ಗಳಷ್ಟು ಹೆಚ್ಚಳವಾಗಿತ್ತು.

ಶುಕ್ರವಾರ ನಡೆದಿದ್ದ ಅಥ್ಲೇಟಿಕ್ಸ್‌ ಫೈನಲ್‌ನಲ್ಲಿ ಭಾರತದ ಅವಿನಾಶ್ ಸಾಬ್ಳೆ ಅವರು 3000 ಮೀ. ಸ್ಟೀಪಲ್‌ಚೇಸ್‌ ಫೈನಲ್‌ ಪಂದ್ಯದಲ್ಲಿ 8 ನಿಮಿಷ ಮತ್ತು 17.09 ಸೆಕೆಂಡುಗಳಲ್ಲಿ ಗುರಿ ತಲುಪಿ 9ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಕೀನ್ಯಾದ ಅಮೋಸ್ ಸೆರೆಮ್ 8:06.90 ಸಮಯದೊಂದಿಗೆ ಡೈಮಂಡ್ ಲೀಗ್ ಚಾಂಪಿಯನ್ ಆಗಿ ಹೊರಹೊಮ್ಮಿದರು, ಆದರೆ ಹಾಲಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಮೊರೊಕ್ಕೊದ ಸೌಫಿಯಾನ್ ಎಲ್ ಬಕ್ಕಲಿ (8:08.60) ಎರಡನೇ ಸ್ಥಾನಿಯಾಗಿ ಬೆಳ್ಳಿ ಗೆದ್ದರು. ಟ್ಯುನೀಶಿಯಾದ ಮೊಹಮದ್ ಅಮೀನ್ ಜಿನೌಯಿ 8:09.68 ಸಮಯದೊಂದಿಗೆ ಕಂಚು ಗೆದ್ದರು.

Leave a Reply

Your email address will not be published. Required fields are marked *