ಕೋಲಂಬೋ: ಶ್ರೀಲಂಕಾ ಕ್ರಿಕೆಟಿಗರಾದ ನಿರೋಶನ್ ಡಿಕ್ವೆಲ್ಲಾ ಹಾಗೂ ಕುಸಲ್ ಮೆಂಡಿಸ್ ಬಯೋಬಬಲ್ ಉಲ್ಲಂಘನೆಯ ಆರೋಪ ಎದುರಿಸುತ್ತಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ಗಳ ಸರಣಿಯಲ್ಲಿ ಶ್ರೀಲಂಕಾ ತಂಡದ ಆಟಗಾರರು ಹೊಸ ವಿವಾದ ವೊಂದನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಈ ಇಬ್ಬರು ಇಂಗ್ಲೆಂಡ್ ಡುರ್ಹಾಮ್ ಪಟ್ಟಣದಲ್ಲಿ ರೌಂಡ್ಸ್ ಹಾಕು ತ್ತಿರುವ ವಿಡಿಯೋದಲ್ಲಿ ಶ್ರೀಲಂಕಾದ ಈ ಇಬ್ಬರು ಆಟಗಾರರು ಬಯೋಬಬಲ್ ನಿಯಮ ಉಲ್ಲಂಘಿಸಿ ನೈಟ್ಔಟ್ಗೆ ಹೋಗಿದ್ದಾರೆ. ಮೆಂಡಿಸ್ ಕೈಯಲ್ಲಿ ಬಿಳಿ ಬಣ್ಣದ ಸಿಗರೇಟ್ ಮಾದರಿಯ ವಸ್ತು ಇರೋದನ್ನ ಕಾಣಬಹುದಾಗಿದೆ.
ಈ ಸಂಬಂಧ ಶ್ರೀಲಂಕಾ ಕ್ರಿಕೆಟ್ ಮಂಡಳಿ ತನಿಖೆ ನಡೆಸುತ್ತಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಶಮ್ಮಿ ಸಿವ ಹೇಳಿದ್ದಾರೆ. ಶ್ರೀಲಂಕಾ ಟೀಂ ಮ್ಯಾನೇಜರ್ ಮನುಜಾ ಕರಿಯಪ್ಪೆರುಮಾ ವಿಚಾರವನ್ನ ದೃಢೀಕರಿಸಿದ್ದಾರೆ.