Friday, 8th November 2024

ವಿಶ್ರಾಂತಿ ಬೇಕೆಂದು ಬಿಸಿಸಿಐಗೆ ಮನವಿ ಮಾಡಿಲ್ಲ: ಕೊಹ್ಲಿ ಸ್ಪಷ್ಟನೆ

virat kohli

ಮುಂಬೈ : ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಆಡಲು ನಾನು ಸಿದ್ದನಿದ್ದೇನೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ನಾನು ವಿಶ್ರಾಂತಿ ಪಡೆಯಲು ಬಿಸಿಸಿಐಗೆ ಮನವಿ ಮಾಡಿಲ್ಲ. ನನಗೆ ಯಾವುದೇ ವಿಶ್ರಾಂತಿ ಅಗತ್ಯವಿಲ್ಲ. ಏಕದಿನ ತಂಡದ ನಾಯಕ ಸ್ಥಾನ ನೀಡುತ್ತಿಲ್ಲ ಎಂದಿದ್ದರು. ಮುಖ್ಯ ಆಯ್ಕೆಗಾರರು ನನಗೆ ಮಾಹಿತಿ ನೀಡಿದ್ದರು ಎಂದಿದ್ದಾರೆ.

ಏಕದಿನ ಸರಣಿ ಆಡಲು ಸಿದ್ದನಿದ್ದೇನೆ. ದಕ್ಷಿಣ ಅಫ್ರಿಕಾ ಏಕದಿನ ಸರಣಿಗೆ ನಾನು ಲಭ್ಯನಿದ್ದೇನೆ. ಬಿಸಿಸಿಐ ಜೊತೆಗೆ ವಿಶ್ರಾಂತಿ ಪಡೆಯಲು ಮನವಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ವೈಯುಕ್ತಿಕ ಕಾರಣಗಳಿಂದಾಗಿ ದಕ್ಷಿಣ ಆಫ್ರಿಕಾ ಏಕದಿನ ಸರಣಿಯಿಂದ ಹಿಂದೆ ಸರಿಯ ಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೀಗ ಕೊಹ್ಲಿ ಅವರು ದಕ್ಷೀಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಆಡಲು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.