Saturday, 14th December 2024

ದಿಲ್ಶನ್ ಮಧುಶಂಕ ಗಾಯಕ್ಕೆ ತುತ್ತು: ಮುಂಬೈ ಇಂಡಿಯನ್ಸ್​’ಗೆ ತಲೆನೋವು

ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್​ ಟೂರ್ನಿಗಳಲ್ಲಿ ಒಂದಾದ ಐಪಿಎಲ್​ 17ನೇ ಆವೃತ್ತಿಯ ಪ್ರಾರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, 2023ರ ವರ್ಷಾಂತ್ಯದಲ್ಲಿ ನಡೆದ ಐಪಿಎಲ್​ ಹರಾಜು ಪ್ರಕ್ರಿಯೆ ವೇಳೆ ಮುಂಬೈ ಇಂಡಿಯನ್ಸ್​ ಪಾಲಾಗಿದ್ದ ಶ್ರೀಲಂಕಾದ ಎಡಗೈ ವೇಗಿ ದಿಲ್ಶನ್ ಮಧುಶಂಕ ಗಾಯಕ್ಕೆ ತುತ್ತಾಗಿದ್ದು, ಅವರು ಮುಂಬೈ ತಂಡ ಕೂಡಿಕೊಳ್ಳುವ ಬದಲು ತವರಿಗೆ ವಾಪಸ್​ ಆಗಿದ್ದಾರೆ.

ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದು ಸಂಪೂರ್ಣ ಗುಣಮುಖರಾದರೆ ಮಾತ್ರ ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಹೊಸ ಸೀಸನ್ ಆರಂಭಿಸುವ ಇರಾದೆಯಲ್ಲಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಟಗಾರರ ಗಾಯದ ಚಿಂತೆಯೇ ಹೊಸ ತಲೆನೋವಾಗಿ ಪರಿಣಮಿಸಿದೆ.